ಅಮೆರಿಕದ ನಿಯತಕಾಲಿಕೆ ಫೋರ್ಬ್ಸ್, 2019ರ ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆ: ಮುಕೇಶ್ ಅಂಬಾನಿ ದೇಶದ ನಂ. 1 ಶ್ರೀಮಂತ

0
32

ಅಮೆರಿಕದ ನಿಯತಕಾಲಿಕೆ ಫೋರ್ಬ್ಸ್, 2019ರ ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆಗೊಳಿಸಿದೆ. 51.4 ಬಿಲಿಯನ್ ಡಾಲರ್ (-ಠಿ; 36.50 ಲಕ್ಷ ಕೋಟಿ) ಆಸ್ತಿ ಹೊಂದಿರುವ ರಿಲಯನ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಕೇಶ್ ಅಂಬಾನಿ ಸತತ 12ನೇ ಬಾರಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ನವದೆಹಲಿ:  ಅಮೆರಿಕದ ನಿಯತಕಾಲಿಕೆ ಫೋರ್ಬ್ಸ್, 2019ರ ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆಗೊಳಿಸಿದೆ. 51.4 ಬಿಲಿಯನ್ ಡಾಲರ್ (-ಠಿ; 36.50 ಲಕ್ಷ ಕೋಟಿ) ಆಸ್ತಿ ಹೊಂದಿರುವ ರಿಲಯನ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಕೇಶ್ ಅಂಬಾನಿ ಸತತ 12ನೇ ಬಾರಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್​ನ ಜಿಯೋ ಟೆಲಿಕಾಂ ಘಟಕ ಸ್ಥಾಪನೆಯಾದ ಮೂರು ವರ್ಷದಲ್ಲೇ 340 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ಇದರಿಂದಾಗಿ ಅಂಬಾನಿ ನಿವ್ವಳ ಮೌಲ್ಯಕ್ಕೆ ಹೆಚ್ಚುವರಿ 4.1 ಬಿಲಿಯನ್ ಡಾಲರ್ ಸೇರಿಸಿದ್ದಾರೆ ಎಂದು ಫೋರ್ಬ್ಸ್ ತಿಳಿಸಿದೆ.

ಆರ್ಥಿಕ ಮಂದಗತಿಯ ಕಾರಣ ಭಾರತದ ಶ್ರೀಮಂತರಿಗೆ ಸವಾಲಿನ ವರ್ಷವಾಗಿದ್ದು, 2019ರ ಪಟ್ಟಿಯಲ್ಲಿರುವ ಉದ್ಯಮಿಗಳ ಒಟ್ಟು ಸಂಪತ್ತಿನಲ್ಲಿ ಶೇ. 8 ಕುಸಿತವಾಗಿದೆ. ಇದರ ಪ್ರಮಾಣ 452 ಬಿಲಿಯನ್ ಡಾಲರ್ ಎನ್ನಲಾಗಿದೆ. ಪಟ್ಟಿಯಲ್ಲಿರುವವರಲ್ಲಿ 14 ಜನರು 1 ಬಿಲಿಯನ್ ಡಾಲರ್ ನಷ್ಟ ಹೊಂದಿದ್ದು, ಕಳೆದ ವರ್ಷದ ಪಟ್ಟಿಯಲ್ಲಿದ್ದ 9 ಜನರನ್ನು ಕೈಬಿಡಲಾಗಿದೆ. ಆದರೆ ಉದ್ಯಮಿ ಗೌತಮ್ ಅದಾನಿ ಆಸ್ತಿಯಲ್ಲಿ ಏರಿಕೆಯಾಗಿದ್ದು, ಕಳೆದ ವರ್ಷ 10ನೇ ಸ್ಥಾನದಲ್ಲಿದ್ದ ಅವರು ಈ ಬಾರಿ 15.7 ಬಿಲಿಯನ್ ಡಾಲರ್ (-ಠಿ; 11.14 ಲಕ್ಷ ಕೋಟಿ) ಆಸ್ತಿ ಮೂಲಕ ಭಾರತದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಹಿಂದುಜಾ ಸಹೋದರರು, ಪಲ್ಲೊಂಜಿ ಮಿಸ್ತ್ರಿ, ಉದಯ್ ಕೋಟಕ್, ಶಿವ ನಡಾರ್, ರಾಧಾಕೃಷ್ಣ ದಮಾನಿ, ಗೋದ್ರೆಜ್ ಕುಟುಂಬ, ಲಕ್ಷ್ಮಿ ಮಿತ್ತಲ್ ಹಾಗೂ ಕುಮಾರ್ ಮಂಗಲಂ ಬಿರ್ಲಾ ಇದ್ದಾರೆ. 

ವಿಪ್ರೋ ಸಂಸ್ಥಾಪಕ ಅಜೀಮ್‌ ಪ್ರೇಮ್‌ಜಿ ಹಿಂದಿನ ಬಾರಿ ದ್ವಿತೀಯ ಸ್ಥಾನದಲ್ಲಿದ್ದವರು ಈ ಬಾರಿ 17ನೇ ಸ್ಥಾನದಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಸಂಪತ್ತಿನ ಕೆಲ ಅಂಶವನ್ನು ದಾನವಾಗಿ ನೀಡಿದ್ದರಿಂದ ಈ ಕುಸಿತ ಉಂಟಾಗಿದೆ.