ಅಮೆರಿಕದಿಂದ 13,500 ಕೋಟಿ ರೂ. ವೆಚ್ಚದ ಹೆಲಿಕಾಪ್ಟರ್ ಖರೀದಿಗೆ ಮುಂದಾದ ಭಾರತ

0
271

ಸೇನಾ ಬಲವರ್ಧನೆ ಮತ್ತು ಆಧುನೀಕರಣಕ್ಕೆ ಮುಂದಾಗಿರುವ ಕೇಂದ್ರ ಸರಕಾರ ಅಮೆರಿಕದಿಂದ 13,500 ಕೋಟಿ ರೂ. ರಕ್ಷಣಾ ಮತ್ತು ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಖರೀದಿಗೆ ಮುಂದಾಗಿದೆ

ಹೊಸದಿಲ್ಲಿ: ಸೇನಾ ಬಲವರ್ಧನೆ ಮತ್ತು ಆಧುನೀಕರಣಕ್ಕೆ ಮುಂದಾಗಿರುವ ಕೇಂದ್ರ ಸರಕಾರ ಅಮೆರಿಕದಿಂದ 13,500 ಕೋಟಿ ರೂ. ರಕ್ಷಣಾ ಮತ್ತು ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಖರೀದಿಗೆ ಮುಂದಾಗಿದೆ
ರಷ್ಯಾ ಜತೆ ಎಸ್‌-400 ಟ್ರಂಪ್ ಕ್ಷಿಪಣಿ ಖರೀದಿಯ ಬೆನ್ನಲ್ಲೇ ಅಮೆರಿಕದ ಮುನಿಸಿಗೆ ಕಾರಣವಾಗಿದ್ದ ಭಾರತ, ಇದೀಗ ಟ್ರಂಪ್ ಸರಕಾರದ ಜತೆ ನೇರವಾಗಿ ಮತ್ತೊಂದು ರಕ್ಷಣಾ ಖರೀದಿಗೆ ಮುಂದಾಗಿದೆ. 

ಅಮೆರಿಕದ ಸಿಕೋಸ್ಕಿ ಲಾಕ್‌ಹೀಡ್ ಮಾರ್ಟಿನ್ ನಿರ್ಮಾಣದ ಬಹೂಪಯೋಗಿ ಎಂಎಚ್‌-60 ರೋಮಿಯೋ ಹೆಲಿಕಾಪ್ಟರ್ ಟಾರ್ಪೆಡೋ ಮತ್ತು ಕ್ಷಿಪಣಿ ಹೊಂದಿದ್ದು, ಸಬ್‌ಮೆರಿನ್‌ಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. 

ಈ ಹೆಲಿಕಾಪ್ಟರ್‌ಗಳ ಖರೀದಿಗೆ ಮುಂದಾಗಿರುವ ಭಾರತ, ಅವುಗಳನ್ನು 2020-2024ರೊಳಗಾಗಿ ಒದಗಿಸಿಕೊಡುವಂತೆ ಬೇಡಿಕೆ ಸಲ್ಲಿಸಲಿದೆ. 

ಈಗಾಗಲೇ ಸಾಗರದಲ್ಲಿ ಚೀನಾದ ಸಬ್‌ಮರಿನ್‌ಗಳು ನಿರಂತರ ಕಣ್ಗಾವಲು ಇರಿಸಿದ್ದು, ದೇಶದ ಜಲಪರಿಧಿಯನ್ನೂ ಪ್ರವೇಶಿಸಲು ಯತ್ನಿಸುತ್ತವೆ. ಹೀಗಾಗಿ ಚೀನಾದ ಹಾರಾಟಕ್ಕೆ ಮಿತಿ ಹಾಕಲು ಮತ್ತು ದೇಶದ ಸಾಗರ ರಕ್ಷಣೆ, ನೌಕಾಪಡೆಯ ಬಲವರ್ಧನೆಗೆ ಎಂಎಚ್‌-60 ಬಹೂಪಯೋಗಿ ಹೆಲಿಕಾಪ್ಟರ್‌ನ ಅವಶ್ಯಕತೆಯಿದ್ದು, ಅಮೆರಿಕದೊಂದಿಗೆ ಸರಕಾರ ಶೀಘ್ರ ಒಪ್ಪಂದ ಅಂತಿಮಗೊಳಿಸಲಿದೆ. .