ಅಮೆರಿಕಕ್ಕೆ ಅಕ್ರಮವಾಗಿ ನುಸುಳುತ್ತಿರುವ ಬಂಧಿತ ಭಾರತೀಯರ ಸಂಖ್ಯೆ 3 ಪಟ್ಟು ಹೆಚ್ಚಳ

0
524

ಅಮೆರಿಕ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿ ಬಂಧನಕ್ಕೀಡಾಗಿರುವ ಭಾರತೀಯರ ಸಂಖ್ಯೆ ಸುಮಾರು 3 ಪಟ್ಟು ಹೆಚ್ಚಳವಾಗಿದೆ. 2017ರ ಅಮೆರಿಕದ ಹಣಕಾಸಿನ ವರ್ಷದಲ್ಲಿ 3162 ಭಾರತೀಯರನ್ನು ವಶಕ್ಕೆ ಪಡೆದಿದ್ರೆ, 2018ರ ಸೆಪ್ಟೆಂಬರ್‌ 30ರವರೆಗೆ ಈ ಸಂಖ್ಯೆ ಸುಮಾರು 9 ಸಾವಿರಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

ವಾಷಿಂಗ್ಟನ್: 2018ರ ಈವರೆಗಿನ ಮಾಹಿತಿಯ ಪ್ರಕಾರ ಬಂಧನಕ್ಕೀಡಾಗಿರುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ ಎಂದು ಅಮೆರಿಕದ ಕಸ್ಟಮ್ಸ್ ಹಾಗೂ ಗಡಿ ರಕ್ಷಣೆ ( ಸಿಬಿಪಿ ) ತಿಳಿಸಿದೆ. ವ್ಯಕ್ತಿಯೊಬ್ಬರಿಗೆ 25 ಸಾವಿರ ಡಾಲರ್‌ನಿಂದ 50 ಸಾವಿರ ಡಾಲರ್‌ ಮೌಲ್ಯದ ಕಳ್ಳ ಸಾಗಾಣಿಕೆಯಾಗುತ್ತಿರುವ ಉಂಗುರಗಳನ್ನು ನೀಡುವ ಮೂಲಕ ಅಮೆರಿಕ- ಮೆಕ್ಸಿಕೋ ಗಡಿಯನ್ನು ಅಕ್ರಮವಾಗಿ ದಾಟುತ್ತಿರುವ ಸಂಖ್ಯೆಯಲ್ಲಿ ಭಾರತೀಯರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ ಹಾಗೂ ಆಶ್ರಯ ಕೇಳುತ್ತಿದ್ದಾರೆ ಎಂದು ಸಿಬಿಪಿಯ ವಕ್ತಾರ ಸಾಲ್ವಡಾರ್ ಝಮೋರಾ ತಿಳಿಸಿದ್ದಾರೆ. 

ಇನ್ನು, ವಾಷಿಂಗ್ಟನ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿ ಹಾಗೂ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್‌ ಕಚೇರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಮನವಿ ಮಾಡಿದರೂ ಸಹ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ. 

2017ರ ಅಮೆರಿಕದ ಹಣಕಾಸಿನ ವರ್ಷದಲ್ಲಿ 3162 ಭಾರತೀಯರನ್ನು ವಶಕ್ಕೆ ಪಡೆದಿದ್ರೆ, 2018ರ ಸೆಪ್ಟೆಂಬರ್‌ 30ರವರೆಗೆ ಈ ಸಂಖ್ಯೆ ಸುಮಾರು 9 ಸಾವಿರಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಝಮೋರಾ ತಿಳಿಸಿದ್ದಾರೆ. ಇನ್ನು, ಮೆಕ್ಸಿಕಾಲಿಯ 3 ಮೈಲಿ ವಿಸ್ತೀರ್ಣದ ಗಡಿ ಬೇಲಿಯ ಮೂಲಕ ಈ ವರ್ಷ ಸುಮಾರು 4 ಸಾವಿರ ಭಾರತೀಯರು ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದಾರೆ. ಅಲ್ಲದೆ, ಇಲ್ಲಿಗೆ ನುಸುಳಲು ಆ ಗಡಿ ಪ್ರದೇಶ ಸುರಕ್ಷಿತವೆಂಬ ಮಾತಿದೆ ಎಂದು ಅವರು ಹೇಳಿದ್ದಾರೆ. 

ಇನ್ನು, ಮೇಲ್ಜಾತಿಯವರನ್ನು ಮದುವೆಯಾದ ಕಾರಣ ಕೊಲೆಯಾಗುವ ಭೀತಿ ಎದುರಿಸುತ್ತಿರುವ ಭಾರತೀಯರಿಂದ ಹಿಡಿದು ರಾಜಕೀಯ ಕಿರುಕುಳ ಅನುಭವಿಸುತ್ತಿರುವ ಸಿಖ್ಖರವರೆಗೆ ಅಮೆರಿಕದಲ್ಲಿ ಆಶ್ರಯ ಬಯಸುತ್ತಿದ್ದಾರೆ. ಇನ್ನು, ಇತರೆ ವಲಸಿಗರಂತೆ ಮೋಸದಿಂದ ಆಶ್ರಯ ಬಯಸುವವರು ಸಹ ಕಟ್‌ ಅಂಡ್ ಪೇಸ್ಟ್‌ ದಾಖಲೆಗಳನ್ನು ನೀಡುತ್ತಿದ್ದಾರೆ ಎಂದು ಇಮ್ಮಿಗ್ರೇಷನ್‌ ವಕೀಲರು ತಿಳಿಸಿದ್ದಾರೆ. 

2012ರಿಂದ 2017ರ ಹಣಕಾಸು ವರ್ಷದವರೆಗೆ ಶೇ. 42.2 ಭಾರತೀಯರಿಗೆ ಆಶ್ರಯ ನಿರಾಕರಿಸಲಾಗಿದೆ ಎಂದು ಸೈರಾಕ್ಯೂಸ್‌ ವಿಶ್ವವಿದ್ಯಾನಿಲಯದ ದಾಖಲೆಗಳು ತಿಳಿಸುತ್ತವೆ. ಇನ್ನು, ಮೆಕ್ಸಿಕನ್‌ಗಳನ್ನು ಹೊರತುಪಡಿಸಿದರೆ, ಗ್ವಾಟೆಮಾಲಾ, ಹೊಂಡುರಾಸ್ ಹಾಗೂ ಎಲ್‌ ಸಾಲ್ವಡಾರ್‌ನ ನಾಗರಿಕರು 2018ರಲ್ಲಿ ಹೆಚ್ಚಾಗಿ ಅಮೆರಿಕಕ್ಕೆ ಅಕ್ರಮವಾಗಿ ನುಸುಳುತ್ತಿದ್ದಾರೆಂದು ಗಡಿ ಗಸ್ತು ಪಡೆ ದಾಖಲೆಗಳು ಹೇಳುತ್ತವೆ.