ಅಮೆಜಾನ್‌ ನಿರ್ದೇಶಕ ಮಂಡಳಿಗೆ ಇಂದ್ರಾ ನೂಯಿ ನೇಮಕ

0
526

ಪೆಪ್ಸಿಕೊದ ಮಾಜಿ ಸಿಇಒ ಇಂದ್ರಾ ನೂಯಿ ಅವರು, ಇ–ಕಾಮರ್ಸ್‌ನ ದೈತ್ಯ ಸಂಸ್ಥೆ ಅಮೆಜಾನ್‌ ನಿರ್ದೇಶಕ ಮಂಡಳಿಗೆ ಸೇರ್ಪಡೆಯಾಗಿದ್ದಾರೆ.

ವಾಷಿಂಗ್ಟನ್‌ (ಪಿಟಿಐ): ಪೆಪ್ಸಿಕೊದ ಮಾಜಿ ಸಿಇಒ ಇಂದ್ರಾ ನೂಯಿ ಅವರು, ಇ–ಕಾಮರ್ಸ್‌ನ ದೈತ್ಯ ಸಂಸ್ಥೆ ಅಮೆಜಾನ್‌ ನಿರ್ದೇಶಕ ಮಂಡಳಿಗೆ ಸೇರ್ಪಡೆಯಾಗಿದ್ದಾರೆ.

ಭಾರತ ಸಂಜಾತೆಯಾಗಿರುವ ನೂಯಿ ಅವರು, 2018ರ ಅಕ್ಟೋಬರ್‌ನಲ್ಲಿ ಪೆಪ್ಸಿಕೊದ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದರು.  ಅಮೆಜಾನ್‌ ನಿರ್ದೇಶಕ ಮಂಡಳಿಗೆ ಸೇರ್ಪಡೆಯಾದ ಎರಡನೆ ಮಹಿಳೆ ಇವರಾಗಿದ್ದಾರೆ.  ಲೆಕ್ಕಪತ್ರ ಸಮಿತಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಸ್ಟಾರ್‌ಬಕ್ಸ್‌ನ ರೋಸಾಲಿಂಡ್‌ ಬ್ರೀವರ್‌ ಅವರು ಇತ್ತೀಚೆಗೆ ಮಂಡಳಿಯ ನಿರ್ದೇಶಕಿಯಾಗಿ ನೇಮಕಗೊಂಡಿದ್ದರು.