ಅಮೃತಸರದ ಪ್ರಾರ್ಥನಾ ಮಂದಿರ ಮೇಲೆ ದಾಳಿಮಾಡಿದವರ ಸುಳಿವು ನೀಡುವ ವ್ಯಕ್ತಿಗಳಿಗೆ ₹50 ಲಕ್ಷ ರೂ

0
269

ಅಮೃತಸರದ ನಿರಂಕಾರಿ ಪಂಥದ ಪ್ರಾರ್ಥನಾ ಮಂದಿರದ ಮೇಲೆ ಭಾನುವಾರ ನಡೆದ ಗ್ರೆನೇಡ್‌ ದಾಳಿಯು ಭಯೋತ್ಪಾದನೆಯ ಕೃತ್ಯ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ಸಿಂಗ್‌ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಸಚಿವರೊಂದಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ದಾಳಿಯಲ್ಲಿ ಭಾಗಿಯಾದವರ ಬಗ್ಗೆ ಸುಳಿವು ನೀಡುವ ವ್ಯಕ್ತಿಗಳಿಗೆ ₹50 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದರು.

ಚಂಡಿಗಡ (ಪಿಟಿಐ): ಅಮೃತಸರದ ನಿರಂಕಾರಿ ಪಂಥದ ಪ್ರಾರ್ಥನಾ ಮಂದಿರದ ಮೇಲೆ ಭಾನುವಾರ ನಡೆದ ಗ್ರೆನೇಡ್‌ ದಾಳಿಯು ಭಯೋತ್ಪಾದನೆಯ ಕೃತ್ಯ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ಸಿಂಗ್‌ ಹೇಳಿದ್ದಾರೆ. ಅಲ್ಲದೆ ಈ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಿದರು.

ಘಟನಾ ಸ್ಥಳಕ್ಕೆ ಹಿರಿಯ ಸಚಿವರೊಂದಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ದಾಳಿಯಲ್ಲಿ ಭಾಗಿಯಾದವರ ಬಗ್ಗೆ ಸುಳಿವು ನೀಡುವ ವ್ಯಕ್ತಿಗಳಿಗೆ 50 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದರು.

ಪಂಜಾಬ್‌ ಪೊಲೀಸರ ಸಹಾಯ ವಾಣಿ –181ಕ್ಕೆ ಮಾಹಿತಿ ನೀಡಬಹುದಾಗಿದ್ದು, ಮಾಹಿತಿದಾರರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು. ನಿರಂಕಾರಿ ಭವನದ ಮೇಲೆ ನಡೆದ ದಾಳಿಯಲ್ಲಿ ಮೂವರು ಮೃತಪಟ್ಟು, 10 ಜನರಿಗೆ ಗಾಯಗಳಾಗಿತ್ತು.

ಗ್ರೆನೇಡ್‌ನಲ್ಲಿ ಸಾಮ್ಯತೆ

 ‘ಪ್ರಾರ್ಥನಾ ಮಂದಿರದ ದಾಳಿಗೆ ಬಳಸಲಾದ ಗ್ರೆನೇಡ್‌ಗೂ ಪಾಕಿಸ್ತಾನ  ಸೇನಾ ಶಸ್ತ್ರಾಸ್ತ್ರ ತಯಾರಿಕೆ ಕಾರ್ಖಾನೆಯಲ್ಲಿ ನಿರ್ಮಿಸುವ ಗ್ರೆನೇಡ್‌ಗೂ ಸಾಮ್ಯತೆಯಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ’ ಎಂದು ಅಮರಿಂದರ್‌ಸಿಂಗ್‌ ತಿಳಿಸಿದ್ದಾರೆ.

ಐಎಸ್‌ಐ ಬೆಂಬಲಿತ ಖಾಲಿಸ್ತಾನಿ ಉಗ್ರರು ಅಥವಾ ಕಾಶ್ಮೀರದ ಭಯೋತ್ಪಾದಕ ಸಂಘಟನೆಗಳು ಭಾಗಿಯಾಗಿರುವ ಬಗ್ಗೆ ಮೇಲ್ನೋಟದಲ್ಲಿ ಕಂಡುಬಂದಿದೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದರು.