ಅಫ್ಗಾನಿಸ್ತಾನ ತಂಡದ ಕೋಚ್‌ ಹುದ್ದೆ ತೊರೆಯಲಿರುವ “ಫಿಲ್‌ ಸಿಮನ್ಸ್”

0
15

ವಿಶ್ವಕಪ್‌ ಬಳಿಕ ಅಫ್ಗಾನಿಸ್ತಾನ ತಂಡದ ಕೋಚ್‌ ಹುದ್ದೆ ತೊರೆಯುವುದಾಗಿ ಫಿಲ್‌ ಸಿಮನ್ಸ್‌ ಹೇಳಿದ್ದಾರೆ. ತಂಡವನ್ನು ವಿಶ್ವಕಪ್‌ ಟೂರ್ನಿಯವರೆಗೂ ಕೊಂಡೊಯ್ಯುವ ತನ್ನ ಗುರಿ ಈಡೇರಿದೆ ಎಂದು ಅವರು ತಿಳಿಸಿದ್ದಾರೆ.

ನವದೆಹಲಿ (ಎಎಫ್‌ಪಿ): ವಿಶ್ವಕಪ್‌ ಬಳಿಕ ಅಫ್ಗಾನಿಸ್ತಾನ ತಂಡದ ಕೋಚ್‌ ಹುದ್ದೆ ತೊರೆಯುವುದಾಗಿ ಫಿಲ್‌ ಸಿಮನ್ಸ್‌ ಹೇಳಿದ್ದಾರೆ. ತಂಡವನ್ನು ವಿಶ್ವಕಪ್‌ ಟೂರ್ನಿಯವರೆಗೂ ಕೊಂಡೊಯ್ಯುವ ತನ್ನ ಗುರಿ ಈಡೇರಿದೆ ಎಂದು ಅವರು ತಿಳಿಸಿದ್ದಾರೆ.

2017ರ ಡಿಸೆಂಬರ್‌ನಲ್ಲಿ ಅವರು ಅಫ್ಗಾನಿಸ್ತಾನ ತಂಡದ ಕೋಚ್‌ ಜವಾಬ್ದಾರಿ ವಹಿಸಿಕೊಂಡಿದ್ದರು. ಏಕದಿನ ವಿಶ್ವಕಪ್‌ ಬಳಿಕ ತನ್ನ ಗುತ್ತಿಗೆ ಅವಧಿಯನ್ನು ಮುಂದುವರಿಸಲು ಬಯಸಿಲ್ಲ ಎಂದು ಸಿಮನ್ಸ್‌ ನುಡಿದರು.

ಜುಲೈ 15ರ ನಂತರ ಅಫ್ಗಾನಿಸ್ತಾನ ತಂಡದ ಜೊತೆಗಿನ ಅವರ ಒಪ್ಪಂದ ಮುಗಿಯಲಿದೆ. ಸಿಮನ್ಸ್ ನೇತೃತ್ವದಲ್ಲಿ ಅಫ್ಗಾನಿಸ್ತಾನ ತಂಡ 10 ತಂಡಗಳಿರುವ ವಿಶ್ವಕಪ್‌ ಟೂರ್ನಿಯಲ್ಲಿ ಸ್ಥಾನ ಪಡೆದಿದೆ. ಕಳೆದ ವರ್ಷ ನಡೆದ ಅರ್ಹತಾ ಟೂರ್ನಿಯಲ್ಲಿ ಅದು ವೆಸ್ಟ್‌ ಇಂಡೀಸ್‌ ತಂಡವನ್ನು ಮಣಿಸಿತ್ತು.

ವೆಸ್ಟ್‌ ಇಂಡೀಸ್‌ ತಂಡದ ಆಟಗಾರನಾಗಿದ್ದ ಸಿಮನ್ಸ್‌, ಅಫ್ಗಾನಿಸ್ತಾನ ತಂಡ ಮೊದಲ ಬಾರಿ ಟೆಸ್ಟ್‌ ಆಡುವಂತೆ ಮಾಡಿದ್ದರು.  ಮಾರ್ಚ್‌ನಲ್ಲಿ ಐರ್ಲೆಂಡ್‌ ವಿರುದ್ಧ ಅಫ್ಗಾನಿಸ್ತಾನ ತಂಡವು ಮೊದಲ ಟೆಸ್ಟ್‌ ಜಯ ಸಾಧಿಸಿತ್ತು.

ವೆಸ್ಟ್ ಇಂಡೀಸ್ ಮಾಜಿ ಆಟಗಾರನಾಗಿದ್ದ  “ಫಿಲ್‌ ಸಿಮನ್ಸ್‌” ಒಟ್ಟು 26 ಅಂತರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿ 1,002 ರನ್ ಗಳಿಸಿದ್ದಾರೆ. ಹಾಗೆಯೇ 143 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿ 3,625 ರನ್ ಗಳಿಸಿದ್ದಾರೆ.