‘ಅಪಾಯದಲ್ಲಿ ರೋಹಿಂಗ್ಯಾ ಮುಸ್ಲಿಂ ಯುವತಿಯರು’ : ವಿಶ್ವಸಂಸ್ಥೆಯ ವಲಸೆ ಎಜೆನ್ಸಿ ವರದಿ

0
279

ಕಳ್ಳಸಾಗಾಣೆ ಮೂಲಕ ಬಾಂಗ್ಲಾ ದೇಶದಲ್ಲಿರುವ ರೋಹಿಂಗ್ಯಾ ಸಮುದಾಯದ ಮುಸ್ಲಿಂ ಯುವತಿಯರನ್ನು ಅಪಾಯಕರವಾದ ಸ್ಥಳಗಳಲ್ಲಿ ಬಲವಂತವಾಗಿ ಕೆಲಸಕ್ಕೆ ದೂಡಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ವಲಸೆ ಎಜೆನ್ಸಿ (ಐಒಎಂ) ತಿಳಿಸಿದೆ.

ವಿಶ್ವಸಂಸ್ಥೆ (ಪಿಟಿಐ): ಕಳ್ಳಸಾಗಾಣೆ ಮೂಲಕ ಬಾಂಗ್ಲಾ ದೇಶದಲ್ಲಿರುವ ರೋಹಿಂಗ್ಯಾ ಸಮುದಾಯದ ಮುಸ್ಲಿಂ ಯುವತಿಯರನ್ನು ಅಪಾಯಕರವಾದ ಸ್ಥಳಗಳಲ್ಲಿ ಬಲವಂತವಾಗಿ ಕೆಲಸಕ್ಕೆ ದೂಡಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ವಲಸೆ ಎಜೆನ್ಸಿ (ಐಒಎಂ) ತಿಳಿಸಿದೆ.

ಬಾಂಗ್ಲಾ ದೇಶದಲ್ಲಿ ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರ ಸಂಖ್ಯೆ 10 ಲಕ್ಷ ತಲುಪಿದೆ. ಈ ಕುಟುಂಬಗಳು ಅನಿವಾರ್ಯವಾಗಿ ಹಣ ಗಳಿಸಲೇಬೇಕು ಎಂಬ ಪರಿಸ್ಥಿತಿಯಲ್ಲಿದ್ದು, ಯುವತಿಯರನ್ನು ಒತ್ತಾಯದಿಂದ ಕೆಲಸಕ್ಕೆ ಕಳುಹಿಸಲಾಗುತ್ತಿದೆ ಎಂದು ಐಒಎಂ ಹೇಳಿದೆ.

ಬಲವಂತವಾಗಿ ಕೆಲಸಕ್ಕೆ ತಳ್ಳಲ್ಪಟ್ಟ ನಿರಾಶ್ರಿತರ ಮೂರನೇ ಎರಡಷ್ಟು ಭಾಗದ ಮಹಿಳೆಯರು ಮತ್ತು ಯುವತಿಯರು ಕಾಕ್ಸ್‌ ಬಜಾರ್‌ನಲ್ಲಿ ಐಒಎಂನ ರಕ್ಷಣಾ ಸೇವೆಯ ಬೆಂಬಲ ಪಡೆದಿದ್ದಾರೆ. ಶೇ 10 ರಷ್ಟು ಮಂದಿ ಲೈಂಗಿಕ ದುರ್ಬಳಕೆಗೆ ಒಳಗಾಗಿದ್ದಾರೆ ಎಂದು ಐಒಎಂ ಹೇಳಿದೆ.

ಪುರುಷರು ಹಾಗೂ ಯುವಕರು ಸಹ ಇದರಿಂದ ವಿನಾಯಿತಿ ಹೊಂದಿಲ್ಲ. ಉತ್ತಮ ಜೀವನ ಹಾಗೂ ಕೆಲಸ ಕೊಡಿಸುವ ಸುಳ್ಳು ಭರವಸೆಗಳಿಗೆ ಮರುಳಾಗಿ ಅಪಾಯದ ಅರಿವಿಲ್ಲದೇ ಬಲಿಪಶುಗಳಾಗುತ್ತಿದ್ದಾರೆ ಎಂದು ಹೇಳಲಾಗಿದೆ.