ಅನಿವಾಸಿ ಭಾರತೀಯ ಪ್ರೊಫೆಸರ್‌ “ಭರತ್‌ ಆನಂದ”ಗೆ ಉನ್ನತ ಹುದ್ದೆ

0
17

ಅನಿವಾಸಿ ಭಾರತೀಯ ಪ್ರೊಫೆಸರ್‌ ಭರತ್‌ ಆನಂದ ಅವರನ್ನು ಹಾವರ್ಡ್‌ ವಿಶ್ವವಿದ್ಯಾಲಯದ ‘ವೈಸ್‌ ಪ್ರವೋಸ್ಟ್‌ ಫಾರ್‌ ಅಡ್ವಾನ್ಸಸ್‌ ಇನ್‌ ಲರ್ನಿಂಗ್‌’ (ವಿಪಿಎಎಲ್‌) ಕೇಂದ್ರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಅಕ್ಟೋಬರ್‌ನಲ್ಲಿ ಇವರು ಹಾಲಿ ಮುಖ್ಯಸ್ಥ ಪೀಟರ್‌ ಬೋಲ್‌ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.

ನ್ಯೂಯಾರ್ಕ್‌: ಅನಿವಾಸಿ ಭಾರತೀಯ ಪ್ರೊಫೆಸರ್‌ ಭರತ್‌ ಆನಂದ ಅವರನ್ನು ಹಾವರ್ಡ್‌ ವಿಶ್ವವಿದ್ಯಾಲಯದ ‘ವೈಸ್‌ ಪ್ರವೋಸ್ಟ್‌ ಫಾರ್‌ ಅಡ್ವಾನ್ಸಸ್‌ ಇನ್‌ ಲರ್ನಿಂಗ್‌’ (ವಿಪಿಎಎಲ್‌) ಕೇಂದ್ರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಅಕ್ಟೋಬರ್‌ನಲ್ಲಿ ಇವರು ಹಾಲಿ ಮುಖ್ಯಸ್ಥ ಪೀಟರ್‌ ಬೋಲ್‌ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.

ಹಾವರ್ಡ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ ಮತ್ತು ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಿರುವ ಆನಂದ ಅವರಿಗೆ ಡಿಜಿಟಲ್‌ ತಂತ್ರಜ್ಞಾನದ ಮೂಲಕ ಕಲಿಕೆಯಲ್ಲಿ ಹೊಸ ಹೊಸ ಬದಲಾವಣೆಗಳನ್ನು ತರುವಲ್ಲಿ ಸಾಕಷ್ಟು ಅನುಭವವಿದೆ. ಇದನ್ನು ಆಧಾರವಾಗಿಟ್ಟುಕೊಂಡು ವಿಪಿಎಎಲ್‌ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ಹಾವರ್ಡ್‌ ವಿವಿ ವರದಿ ತಿಳಿಸಿದೆ. 

ಹಾವರ್ಡ್‌ ಬ್ಯೂಸಿನೆಸ್‌ ಸ್ಕೂಲ್‌ನ ಪ್ರೊಫೆಸರ್‌ ಆಗಿರುವ ಆನಂದ ಅವರು ಈ ಹೊಸ ಸವಾಲು ಸ್ವೀಕರಿಸಲು ಉತ್ಸುಕವಾಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇವರು ಹಾವರ್ಡ್‌ ವಿವಿಯ ಶಾಲಾ ಡಿಜಿಟಲ್‌ ಕಲಿಕಾ ಕೇಂದ್ರ ಕಾರ‍್ಯಕ್ರಮ ಎಚ್‌ಬಿಎಕ್ಸ್‌ನ ಸಿನಿಯರ್‌ ಅಸೋಸಿಯೇಟ್‌ ಡೀನ್‌ ಕೂಡ ಆಗಿದ್ದಾರೆ.