ಅಥ್ಲೀಟ್‌ ಕಿಪ್ಯೆಗೋನ್‌ ಬೆಟ್‌ ಮೇಲೆ ನಾಲ್ಕು ವರ್ಷ ನಿಷೇಧ

0
145

ನಿಷೇ ಧಿತ ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾದ ಕಾರಣ ಕೀನ್ಯಾದ ಅಥ್ಲೀಟ್‌ ಕಿಪ್ಯೆಗೋನ್‌ ಬೆಟ್‌ ಅವರ ಮೇಲೆ ನಾಲ್ಕು ವರ್ಷ ನಿಷೇಧ ಹೇರಲಾಗಿದೆ.

ಮೊನಾಕೊ (ರಾಯಿಟರ್ಸ್‌): ನಿಷೇ ಧಿತ ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾದ ಕಾರಣ ಕೀನ್ಯಾದ ಅಥ್ಲೀಟ್‌ ಕಿಪ್ಯೆಗೋನ್‌ ಬೆಟ್‌ ಅವರ ಮೇಲೆ ನಾಲ್ಕು ವರ್ಷ ನಿಷೇಧ ಹೇರಲಾಗಿದೆ.

ಈ ವಿಷಯವನ್ನು ಐಎಎಎಫ್‌ ಅಥ್ಲೆಟಿಕ್ಸ್‌ ಇಂಟಿಗ್ರಿಟಿ ಯೂನಿಟ್‌ (ಎಐಯು) ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

20 ವರ್ಷ ವಯಸ್ಸಿನ ಬೆಟ್‌ 2017ರಲ್ಲಿ ಲಂಡನ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನ 800 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು.

ಬೆಟ್‌ ಅವರಿಂದ ಸಂಗ್ರಹಿಸಿದ್ದ ಮೂತ್ರದ ಮಾದರಿಯಲ್ಲಿ ನಿಷೇಧಿತ ಎರಿತ್ರೋ‍ಪೊಯಿಟಿನ್‌ (ಇಪಿಒ) ಮದ್ದಿನ ಅಂಶ ಪತ್ತೆಯಾಗಿತ್ತು.

ವಿಶ್ವ ಉದ್ದೀಪನಾ ಮದ್ದು ತಡೆ ಘಟಕದ (ವಾಡಾ) ವರದಿಯ ಪ್ರಕಾರ 2004ರಿಂದ 2018ರ ಆಗಸ್ಟ್‌ 1ರ ಅವಧಿಯಲ್ಲಿ ಪೂರ್ವ ಆಫ್ರಿಕಾ ದೇಶಗಳ 138 ಮಂದಿ ಅಥ್ಲೀಟ್‌ಗಳು ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ.