ಅತಿ ಹೆಚ್ಚು ಗಳಿಕೆ: ಫೋರ್ಬ್ಸ್‌ ಪಟ್ಟಿ ಬಿಡುಗಡೆ : ಮೂರನೇ ವರ್ಷವೂ ಸಲ್ಮಾನ್ ಖಾನ್ ಮೊದಲಿಗ

0
596

ಭಾರತೀಯ ಸೆಲೆಬ್ರಿಟಿಗಳ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್ ಸತತ ಮೂರನೇ ಬಾರಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.ಭಾರತದ 100 ತಾರೆಯರ ಪಟ್ಟಿಯನ್ನು ಫೋರ್ಬ್ಸ್‌ ಬಿಡುಗಡೆ ಮಾಡಿದ್ದು, 52 ವರ್ಷದ ಸಲ್ಮಾನ್‌ ಖಾನ್‌ ಮೊದಲ ಸ್ಥಾನದಲ್ಲಿದ್ದಾರೆ.

ಮುಂಬೈ (ಪಿಟಿಐ): ಭಾರತೀಯ ಸೆಲೆಬ್ರಿಟಿಗಳ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್ ಸತತ ಮೂರನೇ ಬಾರಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.

ಭಾರತದ 100 ತಾರೆಯರ ಪಟ್ಟಿಯನ್ನು ಫೋರ್ಬ್ಸ್‌ ಬಿಡುಗಡೆ ಮಾಡಿದ್ದು, 52 ವರ್ಷದ ಸಲ್ಮಾನ್‌ ಖಾನ್‌ ಮೊದಲ ಸ್ಥಾನದಲ್ಲಿದ್ದಾರೆ. 

ಚಲನಚಿತ್ರ, ಕಿರುತೆರೆ ಹಾಗೂ ವಿವಿಧ ಉತ್ಪನ್ನಗಳ ಜಾಹೀರಾತಿನಿಂದ ಸಲ್ಮಾನ್‌ ಖಾನ್‌ ಅವರು, 2017ರ ಅಕ್ಟೋಬರ್ 1ರಿಂದ 2018ರ ಸೆಪ್ಟೆಂಬರ್‌ 30ರ ಅವಧಿಯಲ್ಲಿ ಒಟ್ಟು 253.25 ಕೋಟಿ ಗಳಿಸಿದ್ದಾರೆ ಎಂದು ಫೋರ್ಬ್ಸ್‌ ನಿಯತಕಾಲಿಕೆ ತಿಳಿಸಿದೆ.

ಭಾರತ ಕ್ರಿಕೆಟ್ ತಂಡ ನಾಯಕ ವಿರಾಟ್‌ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದು, ವಾರ್ಷಿಕ 228.09 ಕೋಟಿ ಗಳಿಸಿದ್ದಾರೆ. ಎರಡನೇ ಸ್ಥಾನ ಪಡೆದ ಮೊದಲ ಕ್ರೀಡಾಪಟು ಇವರು. ಕಳೆದ ಬಾರಿ ಎಡನೇ ಸ್ಥಾನದಲ್ಲಿದ್ದ ಶಾರುಖ್‌ ಖಾನ್ ಅವರು ಈ ಬಾರಿ  53 ಕೋಟಿ ಗಳಿಸಿ 13ನೇ ಸ್ಥಾನದಲ್ಲಿದ್ದಾರೆ.

185 ಕೋಟಿ ಗಳಿಸಿರುವ ಅಕ್ಷಯ ಕುಮಾರ್‌ ಮೂರನೇ ಸ್ಥಾನದಲ್ಲಿದ್ದಾರೆ.

112.8 ಕೋಟಿ ಆದಾಯ ಗಳಿಸಿರುವ ದೀಪಿಕಾ ಪಡುಕೋಣೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮಹಿಳಾ ಸೆಲೆಬ್ರಿಟಿಗಳಲ್ಲಿ ದೀಪಿಕಾ ಮೊದಲ ಸ್ಥಾನದಲ್ಲಿದ್ದಾರೆ.

ರಣವೀರ್‌ ಸಿಂಗ್‌ 84.67 ಕೋಟಿ ಗಳಿಸಿ ಎಂಟನೇ ಸ್ಥಾನದಲ್ಲಿದ್ದಾರೆ.

ಈ ಬಾರಿ 18 ಮಹಿಳಾ ಸೆಲೆಬ್ರೆಟಿಗಳು ಸ್ಥಾನಪಡೆದಿದ್ದು, ಅದರಲ್ಲಿ ಅಲಿಯಾ ಭಟ್‌, ಅನುಷ್ಕಾ, ಕತ್ರೀನಾ ಕೈಪ್‌, ಪಿ.ವಿ ಸಿಂಧು ಹಾಗೂ ಸೈನಾ ಇದ್ದಾರೆ. ಇದೇ ಮೊದಲ ಬಾರಿಗೆ ತೆಲುಗು, ಮಲಯಾಳ ನಟರು 100ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತದ ತಾರೆಗಳ ಒಟ್ಟು ಗಳಿಕೆ ಈ ಬಾರಿ ಶೇ 17ರಷ್ಟು ಹೆಚ್ಚಳವಾಗಿದೆ. ಕಳೆದ ಬಾರಿ 2,683 ಕೋಟಿ ಗಳಿಸಿದ್ದ ತಾರೆಗಳು ಈ ಬಾರಿ 3,140.25 ಕೋಟಿ ಗಳಿಕೆ ಮಾಡಿದ್ದಾರೆ.