ಅತಿ ಕಿರಿಯ ಮಹಿಳಾ ಪೈಲಟ್‌ ಈಗ ಲಿಂಕ್ಡ್‌ಇನ್‌ ಪ್ರಭಾವಿ

0
1078

ಬೋಯಿಂಗ್‌ 777 ವಿಮಾನವನ್ನು ಚಾಲನೆ ಮಾಡಿದ ವಿಶ್ವದ ಅತಿ ಕಿರಿಯ ಮಹಿಳಾ ಪೈಲಟ್‌ ಎಂಬ ಖ್ಯಾತಿ ಪಡೆದಿರುವ ಭಾರತೀಯ ಮಹಿಳೆ ಅನ್ನಾಯ್‌ ದಿವ್ಯಾ ಅವರು ಮತ್ತೊಂದು ಹಿರಿಮೆಗೆ ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ, ಬಿಲ್‌ ಗೇಟ್ಸ್‌, ಪ್ರಿಯಾಂಕಾ ಚೋಪ್ರಾ, ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಪ್ರಮುಖ 500 ವ್ಯಕ್ತಿಗಳನ್ನು ಒಳಗೊಂಡ ‘ಲಿಂಕ್ಡ್‌ಇನ್‌ ಪ್ರಭಾವಿ’ಗಳ ಪಟ್ಟಿಗೆ ದಿವ್ಯಾ ಸೇರ್ಪಡೆಯಾಗಿದ್ದಾರೆ.

ಹೊಸದಿಲ್ಲಿ: ಬೋಯಿಂಗ್‌ 777 ವಿಮಾನವನ್ನು ಚಾಲನೆ ಮಾಡಿದ ವಿಶ್ವದ ಅತಿ ಕಿರಿಯ ಮಹಿಳಾ ಪೈಲಟ್‌ ಎಂಬ ಖ್ಯಾತಿ ಪಡೆದಿರುವ ಭಾರತೀಯ ಮಹಿಳೆ ಅನ್ನಾಯ್‌ ದಿವ್ಯಾ ಅವರು ಮತ್ತೊಂದು ಹಿರಿಮೆಗೆ ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ, ಬಿಲ್‌ ಗೇಟ್ಸ್‌, ಪ್ರಿಯಾಂಕಾ ಚೋಪ್ರಾ, ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಪ್ರಮುಖ 500 ವ್ಯಕ್ತಿಗಳನ್ನು ಒಳಗೊಂಡ ‘ಲಿಂಕ್ಡ್‌ಇನ್‌ ಪ್ರಭಾವಿ’ಗಳ ಪಟ್ಟಿಗೆ ದಿವ್ಯಾ ಸೇರ್ಪಡೆಯಾಗಿದ್ದಾರೆ.

ವಿಶ್ವಾದ್ಯಂತ ಒಟ್ಟು 60 ಕೋಟಿಗೂ ಹೆಚ್ಚು ಸದಸ್ಯರನ್ನು ಒಳಗೊಂಡಿರುವ ವೃತ್ತಿಪರರ ಆನ್‌ಲೈನ್‌ ವೇದಿಕೆಯಾದ ‘ಲಿಂಕ್ಡ್‌ಇನ್‌’ನಲ್ಲಿ ಮೊದಲ ಪೋಸ್ಟ್‌ ಮಾಡಿರುವ ದಿವ್ಯಾ ಅವರು ತಮ್ಮ ಯಶೋಗಾಥೆಯನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಕಟ್ಟುಪಾಡುಗಳು, ಭಾಷೆಯ ತಡೆಗೋಡೆ ಹಾಗೂ ಕೌಟುಂಬಿಕ ಒತ್ತಡವನ್ನೂ ಮೆಟ್ಟಿ ನಿಂತು ತಾವು ಪುರುಷ ಪ್ರಾಬಲ್ಯದ ಪೈಲಟ್‌ ವೃತ್ತಿಯಲ್ಲಿ ಇಷ್ಟು ಎತ್ತರಕ್ಕೆ ಬೆಳೆದ ಬಗೆಯ ಬಗ್ಗೆ ದಿವ್ಯಾ ವಿವರಿಸಿದ್ದಾರೆ. 2017ರಲ್ಲಿ ದಿವ್ಯಾ ಅವರು ಬೋಯಿಂಗ್‌ 777 ವಿಮಾನ ಚಾಲನೆ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದರು.