“ಅಜಿತ್‌ ಮೋಹನ್‌” ಫೇಸ್‌ಬುಕ್‌ ಭಾರತದ ವ್ಯವಸ್ಥಾಪಕ ನಿರ್ದೇಶಕ

0
717

ಯುವ ಪ್ರತಿಭೆ ಅಜಿತ್‌ ಮೋಹನ್‌ ಅವರು ಪ್ರತಿಷ್ಠಿತ ಫೇಸ್‌ಬುಕ್‌ ಸಂಸ್ಥೆಯ ಭಾರತ ವಿಭಾಗದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಹೈದರಾಬಾದ್‌: ಯುವ ಪ್ರತಿಭೆ ಅಜಿತ್‌ ಮೋಹನ್‌ ಅವರು ಪ್ರತಿಷ್ಠಿತ ಫೇಸ್‌ಬುಕ್‌ ಸಂಸ್ಥೆಯ ಭಾರತ ವಿಭಾಗದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಭಾರತದಲ್ಲಿಫೇಸ್‌ಬುಕ್‌ ಸಂಸ್ಥೆಯ ಸುಗಮ ಕಾರ್ಯನಿರ್ವಹಣೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೊಸದಾಗಿ ಸೃಷ್ಟಿಸಲಾಗಿರುವ ಎಂಡಿ ಹುದ್ದೆಗೆ ಅಜಿತ್‌ ಅವರನ್ನು ನೇಮಿಸಲಾಗಿದೆ. 

ಫೇಸ್‌ಬುಕ್‌ ತನ್ನ ಕಾರ್ಯತಂತ್ರಗಳನ್ನು ಬಲಪಡಿಸಲು ಹಾಗೂ ಜನರೊಂದಿಗೆ ಉತ್ತಮ ಸಂಪರ್ಕ ಪಡೆಯಲು ಅವರ ಮುಂದಾಳತ್ವದಲ್ಲಿನೆರವು ನೀಡಲಿದೆ ಎಂದು ಸಂಸ್ಥೆ ಹೇಳಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಜಿತ್‌, “ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಸಂತಸವಾಗುತ್ತಿದೆ. ನನ್ನ ಗುರಿ ಭಾರತದಲ್ಲಿಫೇಸ್‌ಬುಕ್‌ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವುದೊಂದೇ ಆಗಿದೆ, ಎಂದಿದ್ದಾರೆ.