ಅಜಯ್ ವಿಯೆಟ್ನಾಂ ಓಪನ್ ರನ್ನರ್​ಅಪ್

0
16

ಭಾರತದ ಅಜಯ್ ಜಯರಾಮ್ ವಿಯೆಟ್ನಾಂ ಓಪನ್ ಬಿಡಬ್ಲ್ಯುಎಫ್ ಟೂರ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಇದರಿಂದ ಸತತ 2ನೇ ವಾರ ಭಾರತೀಯರಿಗೆ ಪ್ರಶಸ್ತಿ ಕೈತಪ್ಪಿದೆ.

ಹೋಚಿಮಿನ್ಹ್​ಸಿಟಿ: ಭಾರತದ ಅಜಯ್ ಜಯರಾಮ್ ವಿಯೆಟ್ನಾಂ ಓಪನ್ ಬಿಡಬ್ಲ್ಯುಎಫ್ ಟೂರ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಇದರಿಂದ ಸತತ 2ನೇ ವಾರ ಭಾರತೀಯರಿಗೆ ಪ್ರಶಸ್ತಿ ಕೈತಪ್ಪಿದೆ. ಕಳೆದ ವಾರ ಪಿವಿ ಸಿಂಧು ವಿಶ್ವ ಚಾಂಪಿಯನ್​ಷಿಪ್​ನಲ್ಲಿ ರನ್ನರ್​ಅಪ್ ಸ್ಥಾನಕ್ಕೆ ಸಮಾಧಾನ ಪಟ್ಟಿದ್ದರು.

ಆಗಸ್ಟ್ 12 ರ ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅಜಯ್ 14-21, 10-21 ನೇರ ಗೇಮ್ ಗಳಿಂದ 7ನೇ ಶ್ರೇಯಾಂಕಿತ ಇಂಡೋನೇಷ್ಯಾದ ಶೆಸರ್ ಹಿರೆನ್ ರುಸ್ತಾವಿಟೊಗೆ ಶರಣಾದರು. ಕೇವಲ 28 ನಿಮಿಷಗಳ ಹೋರಾಟದಲ್ಲಿ ಅಜಯ್ ಸೋಲು ಕಂಡರು. ಇದರಿಂದ 30 ವರ್ಷದ ಅವರು ಋತುವಿನ ಮೊದಲ ಪ್ರಶಸ್ತಿ ಗೆಲುವಿನಿಂದ ವಂಚಿತರಾದರು. 

‘ಇಂದು ನಾನು ಲಯ ಕಂಡುಕೊಳ್ಳಲಿಲ್ಲ. ಆರಂಭದಿಂದಲೂ ಸಾಕಷ್ಟು ತಪ್ಪುಗಳನ್ನು ಮಾಡಿದೆ. ಆದರೆ ನಾನಿನ್ನೂ ಈ ವಾರದ ಸಕಾರಾತ್ಮಕ ಅಂಶಗಳತ್ತ ಗಮನ ಹರಿಸುವೆ. ಕಳೆದ ಕೆಲ ತಿಂಗಳಿಂದ ಗುಣಮಟ್ಟದ ಆಟ ಆಡುವಲ್ಲಿ ಸಫಲನಾಗಿದ್ದೇನೆ. ಇನ್ನಷ್ಟು ಬಲಿಷ್ಠ ಆಟಕ್ಕಾಗಿ ಕಠಿಣ ಪರಿಶ್ರಮ ಮುಂದುವರಿಸುವೆ’ ಎಂದು ಅಜಯ್ ಜಯರಾಮ್ ಫೈನಲ್ ಸೋಲಿನ ಬಳಿಕ ಹೇಳಿದರು. -ಪಿಟಿಐ