ಅಕ್ಷಯ್ ವೆಂಕಟೇಶ್​ಗೆ ಗಣಿತದ ನೊಬೆಲ್ ಎನ್ನುವ “ಫೀಲ್ಡ್ಸ್​ ಮೆಡಲ್” ಪ್ರಶಸ್ತಿ

0
103

ಭಾರತೀಯ ಮೂಲದ ಗಣಿತ ಶಾಸ್ತ್ರಜ್ಞ ಅಕ್ಷಯ್ ವೆಂಕಟೇಶ್​ಗೆ ಗಣಿತದ ನೊಬೆಲ್ ಎನ್ನಲಾಗುವ ಪ್ರತಿಷ್ಠಿತ ‘ಫೀಲ್ಡ್ಸ್ ಮೆಡಲ್’ ಪ್ರಶಸ್ತಿ ನೀಡಲಾಗಿದೆ.

ನ್ಯೂಯಾರ್ಕ್: ಭಾರತೀಯ ಮೂಲದ ಗಣಿತ ಶಾಸ್ತ್ರಜ್ಞ ಅಕ್ಷಯ್ ವೆಂಕಟೇಶ್​ಗೆ ಗಣಿತದ ನೊಬೆಲ್ ಎನ್ನಲಾಗುವ ಪ್ರತಿಷ್ಠಿತ ‘ಫೀಲ್ಡ್ಸ್  ಮೆಡಲ್’ ಪ್ರಶಸ್ತಿ ನೀಡಲಾಗಿದೆ.

4 ವರ್ಷಕ್ಕೊಮ್ಮೆ ಈ ಪ್ರಶಸ್ತಿ ನೀಡಲಾಗುತ್ತದೆ. ನವದೆಹಲಿ ಮೂಲದ 40 ವರ್ಷದ ಅಕ್ಷಯ್ ಸ್ಟ್ಯಾನ್​ಫರ್ಡ್ ವಿವಿಯಲ್ಲಿ ಉಪನ್ಯಾಸಕರಾಗಿದ್ದಾರೆ.

ಗಣಿತ ವಿಷಯದಲ್ಲಿ ಸಮಗ್ರ ಅಧ್ಯಯನ ಹಾಗೂ ಸೇವೆಗೆ ಅಂತಾರಾಷ್ಟ್ರೀಯ ಗಣಿತ ಕಾಂಗ್ರೆಸ್ ಈ ಪ್ರಶಸ್ತಿ ನೀಡಿದೆ. ಅಕ್ಷಯ್ ವೆಂಕಟೇಶ್ ಜತೆಗೆ ಕೇಂಬ್ರಿಡ್ಜ್ ವಿವಿಯ ಕೌಶರ್ ಬಿರ್ಕರ್, ಜರ್ಮನಿ ಬಾನ್ ವಿವಿಯ ಪೀಟರ್ ಶೋಲ್ಜೆ, ಜ್ಯುರಿಕ್​ನ ಅಲೆಸಿಯೋ ಫಿಗಾಲಿಗೂ ‘ಫೀಲ್ಡ್ಸ್ ಮೆಡಲ್’ ಪ್ರದಾನ ಮಾಡಲಾಗಿದೆ. ಪ್ರತಿ ವಿಜೇತರಿಗೆ 15 ಸಾವಿರ ಕೆನಡಿಯನ್ ಡಾಲರ್ ದೊರೆತಿದೆ.