ಅಕ್ಟೋಬರ್ 9 ರ ರ ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳು

0
11

ಈ ಕೆಳಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.

ವಿಶ್ವಸಂಸ್ಥೆಗೂ ಬಂದಿದೆ ಹಣದ ಕೊರತೆ: ಗುಟೆರಸ್‌

ವಿಶ್ವಸಂಸ್ಥೆ (ಎಎಫ್‌ಪಿ): ವಿಶ್ವಸಂಸ್ಥೆ 1,637 ಕೋಟಿ ಹಣಕಾಸಿನ ಕೊರತೆ ಎದುರಿಸುತ್ತಿದೆ ಎಂದು ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ತಿಳಿಸಿದ್ದಾರೆ. 

ಅಕ್ಟೋಬರ್ ಅಂತ್ಯದ ವೇಳೆಗೆ ಖರ್ಚಿಗೆ ಹಣವಿಲ್ಲದ ಸ್ಥಿತಿ ಎದುರಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ವೇತನ ಮತ್ತು ಭತ್ಯೆಗಳ ಪಾವತಿಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುವುದು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯ ಎಂದು ವಿಶ್ವಸಂಸ್ಥೆಯ ಸೆಕ್ರೆಟರಿಯೇಟ್ ಸಿಬ್ಬಂದಿಯನ್ನು ಉದ್ದೇಶಿಸಿ ಗುಟೆರಸ್‌ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ. 

2019ರಲ್ಲಿ ನಮ್ಮ ನಿಯಮಿತ ಬಜೆಟ್ ಕಾರ್ಯಾಚರಣೆಗಳಿಗೆ ಅಗತ್ಯವಾದ ಒಟ್ಟು ಮೊತ್ತದ ಶೇ 70ರಷ್ಟು ಮಾತ್ರ ಸದಸ್ಯ ರಾಷ್ಟ್ರಗಳು ಪಾವತಿಸಿವೆ. ಇದು ಸೆಪ್ಟೆಂಬರ್ ಅಂತ್ಯದ ವೇಳೆಗೆ  1,637 ಕೋಟಿ ನಗದು ಕೊರತೆಗೆ ಕಾರಣವಾಗಿದೆ. ಆದ್ದರಿಂದ ವೆಚ್ಚ ಕಡಿತದ ಕ್ರಮ ಅನುಸರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

 

ಲಿಟ್ಟಲ್‌ ದೊಡ್ಡ ಸರಣಿ ಹಂತಕ: ಎಫ್‌ಬಿಐ

ವಾಷಿಂಗ್ಟನ್‌: ಕೊಲೆ ಅಪರಾಧಿ ಸ್ಯಾಮುಯೆಲ್‌ ಲಿಟ್ಟಲ್‌ (79) ಕುರಿತು ಹಲವು ವರ್ಷಗಳ ತನಿಖೆಯ ನಂತರ ಈತ ಅಮೆರಿಕದ ಇತಿಹಾಸದಲ್ಲಿಯೇ ಅತಿ ದೊಡ್ಡ ಸರಣಿ ಹಂತಕ ಎಂದು ಅಕ್ಟೋಬರ್ 6 ರ ಭಾನುವಾರ ಫೆಡರಲ್‌ ತನಿಖಾ ಸಂಸ್ಥೆ (ಎಫ್‌ಬಿಐ) ಘೋಷಿಸಿದೆ.  

93 ಸರಣಿ ಕೊಲೆಗಳನ್ನು ಮಾಡಿರುವುದಾಗಿ ಲಿಟ್ಟಲ್‌ ಒಪ್ಪಿಕೊಂಡಿದ್ದಾನೆ. ಆತ ನೀಡಿರುವ ಎಲ್ಲ ಮಾಹಿತಿಗಳೂ ನಂಬಲರ್ಹವಾಗಿವೆ. ಈಗಾಗಲೇ 50 ಪ್ರಕರಣಗಳನ್ನು ಭೇದಿಸಲಾಗಿದೆ. ಲಿಟ್ಟಲ್‌ಗೆ ವಯಸ್ಸಾಗಿದ್ದು, ಆರೋಗ್ಯವೂ ಹದಗೆಟ್ಟಿರುವುದರಿಂದ ಉಳಿದ ಪ್ರಕರಣಗಳ ತನಿಖೆಯನ್ನು ತ್ವರಿತವಾಗಿ ನಡೆಸುವುದು ಅಗತ್ಯವಾಗಿದೆ. ತಾನೇ ಕೊಲೆ ಮಾಡಿರುವ ಐವರು ಮಹಿಳೆಯರ ಚಿತ್ರವನ್ನು ಲಿಟ್ಟಲ್‌ ಬಿಡಿಸಿದ್ದು, ಇವುಗಳ ಸಹಾಯದಿಂದ ಪ್ರಕರಣವನ್ನು ಪತ್ತೆ ಹಚ್ಚಲು ಸಾರ್ವಜನಿಕರ ಸಹಾಯವನ್ನು ಕೋರಲಾಗಿದೆ’ ಎಂದು ತಿಳಿಸಿದೆ.