ಅಕ್ಟೋಬರ್ 22 ರ ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

0
31

ಈ ಕೆಳಗೆ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆ.

ಈಜಿಪ್ಟ್ ಇಂಟರ್ ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿ: ಭಾರತದ ಕುಹು-ಧೃವ್ ಗೆ ಮಿಶ್ರ ಡಬಲ್ಸ್ ಪ್ರಶಸ್ತಿ

ನವದೆಹಲಿ: ಭಾರತದ ಭರವಸೆಯ ಆಟಗಾರ ಕುಹು ಗರ್ಗ್ ಹಾಗೂ ಧೃವ್ ರಾವತ್ ಜೋಡಿ ಅವರು ಕಾಹೀರಾದಲ್ಲಿ ನಡೆದ ಇಂಟರ್ ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿಯ ಮಿಶ್ರ ಡಬಲ್ಸ್ ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.

ಕುಹು ಹಾಗೂ ರಾವತ್ ಜೋಡಿ 21-16, 22-20 ರಿಂದ ಉತ್ಕೃಷ್ ಆರೋಡಾ ಹಾಗೂ ಕರೀಶ್ಮ್ ವಾಡ್ಕರ್ ಅವರನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟರು. 

ಇದಕ್ಕೆ ಮುನ್ನ ನಡೆದ ಸೆಮೀಸ್ ಪಂದ್ಯದಲ್ಲಿ ಸಹ ಈ ಜೋಡಿ ಅಲ್ಜೀರಿಯಾದ ನಾಲ್ಕನೇ ಶ್ರೇಯಾಂಕಿತ ಕೊಸಿಲಾ ಮಾಮೆರಿ ಮತ್ತು ಲಿಂಡಾ ಮಜ್ರಿ. ವಿರುದ್ಧ 16-21 21-16 21-9 ಸೆಟ್ ಗಳಿಂದ ಗೆಲುವು ಕಂಡಿತ್ತು.

ಆದರೆ ಗರ್ಗ್ ತಾವು ಆಡಿದ್ದ ಮಹಿಳಾ ಡಬಲ್ಸ್ ಪಂದ್ಯಾವಳಿಯಲ್ಲಿ ಗೆಲುವು ಕಾಣದೆ ನಿರಾಶೆ ಅನುಭವಿಸಿದ್ದರು.

 

ಅಂಡರ್-15 ಮಹಿಳಾ ಸ್ಯಾಫ್ ಫುಟ್ಬಾಲ್: ಬಾಂಗ್ಲಾ ಮಣಿಸಿದ 

ಥಿಂಪು (ಭೂತಾನ್): ಭಾರತದ ಮಹಿಳಾ ಫುಟ್ಬಾಲ್ ತಂಡವು ಇಲ್ಲಿ ನಡೆದಿರುವ ಅಂಡರ್-15 ಸ್ಯಾಫ್ ಫುಟ್ಬಾಲ್ ಚಾಂಪಿಯನ್ ಶಿಪ್ ಫೈನಲ್ ನ ಶೂಟೌಟ್ ನಲ್ಲಿ 5-3 ರಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿ, ಪ್ರಶಸ್ತಿಗೆ ಮುತ್ತಿಟ್ಟಿದೆ.

ಎರಡೂ ತಂಡಗಳು ಆರಂಭದಲ್ಲಿ ಆಕ್ರಮಣಕಾರಿ ಆಟ ಆಡಿದವು. ಪಂದ್ಯದಲ್ಲಿ ಭಾರತಕ್ಕೆ ಪೆನಾಲ್ಟಿ ಶೂಟೌಟ್ ಅವಕಾಶ ಲಭಿಸಿದರೂ, ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಗೋಲು ಬಾರಿಸುವಲ್ಲಿ ವಿಫಲವಾದವು. ಹೀಗಾಗಿ ಪಂದ್ಯದ ಫಲಿತಾಂಶ ಅರಿಯಲು ಶೂಟೌಟ್ ಮೊರೆ ಹೋಗಲಾಯಿತು.

ಶೂಟೌಟ್ ನಲ್ಲಿ ಭಾರತ ಐದು ಅವಕಾಶದಲ್ಲಿ ಗೋಲು ಬಾರಿಸಿ ಅಬ್ಬರಿಸಿತು. ಆದರೆ, ಎದುರಾಳಿ ತಂಡ ಮೂರು ಬಾರಿ ಚೆಂಡನ್ನು ಗೋಲು ಪೆಟ್ಟಿಗೆಯ ದರ್ಶನ ಮಾಡಿಸಿತು. ಭಾರತದ ಪರ ಕೊನೆಯ ಗೋಲ್ ನಾಯಕಿ ಶಿಲ್ಕಿ ದೇವಿ ಬಾರಿಸಿದರು. 

 

ರಶೀದ್‌ ಖಾನ್‌ಗೆ ಡಿಮಾಂಡ್‌ (ಅಫ್ಗಾನಿಸ್ತಾನದ ಅಗ್ರಗಣ್ಯ ಟಿ–20 ಬೌಲರ್‌)

ಲಂಡನ್‌ (ರಾಯಿಟರ್ಸ್‌): ವಿಶ್ವದ ಅಗ್ರಗಣ್ಯ ಟಿ–20 ಬೌಲರ್‌, ಅಫ್ಗಾನಿಸ್ತಾನದ ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಮುಂದಿನ ವರ್ಷ ನಡೆಯಲಿರುವ ‘ದಿ ಹಂಡ್ರೆಡ್‌’ (ನೂರು ಎಸೆತಗಳ ಇನಿಂಗ್ಸ್‌ನ ಕ್ರಿಕೆಟ್‌) ಟೂರ್ನಿಗೆ ಆಯ್ಕೆಯಾದ ಮೊದಲ ಸಾಗರೋತ್ತರ ಆಟಗಾರ ಎನಿಸಿದರು.

ಟಿ–20 ಮಾದರಿಯ ನಿಪುಣರಾದ ಕ್ರಿಸ್‌ ಗೇಲ್‌ ಮತ್ತು ಲಸಿತ್‌ ಮಾಲಿಂಗ, ಭಾನುವಾರ ನಡೆದ ಹರಾಜಿನಲ್ಲಿ ಸ್ಥಾನ ಪಡೆದಿಲ್ಲ. ರಶೀದ್‌ ಅವರನ್ನು ಟ್ರೆಂಟ್‌ ರಾಕೆಟರ್ಸ್‌ 1.25 ಕೋಟಿ (1.25 ಲಕ್ಷ ಪೌಂಡ್‌) ಕೊಟ್ಟು ಖರೀದಿಸಿದೆ.

ಆಸ್ಟ್ರೇಲಿಯಾ ಆಟಗಾರರಿಗೆ ಬೇಡಿಕೆ ಇತ್ತು. ಬ್ಯಾಟ್ಸ್‌ಮನ್‌ ಸ್ಟೀವನ್‌ ಸ್ಮಿತ್‌ ಮತ್ತು ವೇಗಿ ಮಿಚೆಲ್‌ ಸ್ಟಾರ್ಕ್‌ ಅವರನ್ನು ವೆಲ್ಶ್ ಫೈರ್‌ ತಂಡ ತಲಾ 1.25 ಕೋಟಿಗೆ ಪಡೆದಿದೆ. ಡೇವಿಡ್‌ ವಾರ್ನರ್‌, ಸದರ್ನ್‌ ಬ್ರೇವ್‌ ತಂಡಕ್ಕೆ ಸೇರ್ಪಡೆ ಆಗಿದ್ದಾರೆ. ಗೇಲ್‌, ಲಸಿತ್‌ ಕೂಡ ಪಟ್ಟಿಯಲ್ಲಿದ್ದರೂ ಅವರು ಸ್ಥಾನ ಪಡೆಯಲಿಲ್ಲ. ಎಂಟು ತಂಡಗಳು ಭಾಗವಹಿಸಲಿವೆ.

ರಶೀದ್‌ ಅವರನ್ನು ಟ್ರೆಂಟ್‌ ರಾಕೆಟರ್ಸ್‌ 1.25 ಕೋಟಿ (1.25 ಲಕ್ಷ ಪೌಂಡ್‌) ಕೊಟ್ಟು ಖರೀದಿಸಿದೆ