ಅಕ್ಟೋಬರ್ 16 ರ ರ ಕ್ರಿಕೆಟ್ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

0
14

ಈ ಕೆಳಗೆ ಕ್ರಿಕೆಟ್ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆ

ವಿಶ್ವ ಸೀರಿಸ್‌ ಟ್ವೆಂಟಿ–20 ಟೂರ್ನಿಯಲ್ಲಿ ಸಚಿನ್‌, ಲಾರಾ ಆಟ

ಮುಂಬೈ (ರಾಯಿಟರ್ಸ್‌): ಭಾರತದ ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಮತ್ತು ವೆಸ್ಟ್‌ ಇಂಡೀಸ್‌ನ ಬ್ರಯನ್‌ ಲಾರಾ ಅವರು ಮುಂದಿನ ವರ್ಷ ಭಾರತದಲ್ಲಿ ನಡೆಯುವ ವಿಶ್ವ ಸೀರಿಸ್‌ ಟ್ವೆಂಟಿ–20 ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ರಸ್ತೆ ಸುರ ಕ್ಷತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷವೂ ವಿಶ್ವ ಸೀರಿಸ್‌ ಟೂರ್ನಿ ಆಯೋಜಿಸಲಾಗುತ್ತಿದೆ. ಇದರಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್‌ ಇಂಡೀಸ್‌ ಮತ್ತು ಭಾರತದ ಹಿರಿಯ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ.

ಟೂರ್ನಿಯು ಮುಂದಿನ ವರ್ಷದ ಫೆಬ್ರುವರಿ 2ರಿಂದ 16ರವರೆಗೆ ನಡೆಯಲಿದೆ. ಭಾರತದ ವೀರೇಂದ್ರ ಸೆಹ್ವಾಗ್‌, ಆಸ್ಟ್ರೇಲಿಯಾದ ಬ್ರೆಟ್‌ ಲೀ, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್‌ ಮತ್ತು ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್‌ ಅವರೂ ಇದರಲ್ಲಿ ಆಡಲಿದ್ದಾರೆ.

46 ವರ್ಷ ವಯಸ್ಸಿನ ಸಚಿನ್‌, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 34,000ರನ್‌ ಗಳಿಸಿದ ಸಾಧನೆ ಮಾಡಿದ್ದಾರೆ. ಶತಕಗಳ ಶತಕ ಬಾರಿಸಿದ ಹಿರಿಮೆಯೂ ಅವರದ್ದಾಗಿದೆ.

 

ವೆಸ್ಟ್‌ ಇಂಡೀಸ್‌ಗೆ ಸಿಮನ್ಸ್‌ ಕೋಚ್‌

ಸೇಂಟ್‌ ಜಾನ್‌ (ಎಎಫ್‌ಪಿ): ಹಿರಿಯ ಆಟಗಾರ ಫಿಲ್‌ ಸಿಮನ್ಸ್‌ ಅವರನ್ನು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಿಸಲಾಗಿದೆ.

ಈ ವಿಷಯವನ್ನು ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ (ಸಿಡಬ್ಲ್ಯುಐ) ಅಕ್ಟೋಬರ್ 14 ರ ಸೋಮವಾರ ಪ್ರಕಟಿಸಿದೆ. ಅವರು ಮುಂದಿನ ನಾಲ್ಕು ವರ್ಷಗಳ ಕಾಲ ಈ ಹುದ್ದೆಯಲ್ಲಿ ಇರಲಿದ್ದಾರೆ.

2015ರಲ್ಲೂ ಸಿಮನ್ಸ್‌ ಅವರು ವಿಂಡೀಸ್ ತಂಡ ತರಬೇತುದಾರರಾಗಿ ನೇಮಕಗೊಂಡಿದ್ದರು ಅವರ ಮಾರ್ಗದರ್ಶನದಲ್ಲಿ ತಂಡವು 2016 ರ ಟ್ವೆಂಟಿ-20 ವಿಶ್ವಕಪ್ ನಲ್ಲಿ ಟ್ರೋಪಿ ಜಯಿಸಿತ್ತು. ಅದೇ ವರ್ಷದ ಸೆಪ್ಟೆಂಬರ್ ನಲ್ಲಿ ಅವರನ್ನು ಕೋಚ್‌ ಹುದ್ದೆಯಿಂದ ವಜಾ ಮಾಡಲಾಗಿತ್ತು.

ಸಿಡಬ್ಲ್ಯು.ಐ ಸರಿಯಾದ ಸಮಯದಲ್ಲಿ ಸೂಕ್ತ ವ್ಯಕ್ತಿಯನ್ನು ಕೋಚ್ ಹುದ್ದೆಗೆ ನೇಮಿಸಿದೆ. ಎಂದು ಸಿಡಬ್ಲ್ಯು.ಐ  ಅಧ್ಯಕ್ಷ ರಿಕಿ ಸ್ಕೆರಿಟ್ ಅವರು ತಿಳಿಸಿದ್ದಾರೆ.