ಅಕ್ಟೋಬರ್​ 21 ರಂದು ಪೊಲೀಸ್​​ ಹುತಾತ್ಮರ ದಿನ: ರಾಷ್ಟ್ರಕ್ಕೆ ಅರ್ಪಿಸಿದ ಪ್ರಧಾನಿ ಮೋದಿ

0
998

ರಾಷ್ಟ್ರೀಯ ಪೊಲೀಸ್​ ಹುತಾತ್ಮ ದಿನವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ತ್ಯಾಗ ಬಲಿದಾನ ಮಾಡಿದ ಪೊಲೀಸರಿಗೆ ಗೌರವ ಸೂಚಿಸಿದ್ದಾರೆ.

ಪ್ರತಿ ವರ್ಷ ಅಕ್ಟೋಬರ್​ 21 ರಂದು ಪೊಲೀಸ್​​ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. 1959 ರಲ್ಲಿ ಚೀನಾ ಪಡೆ ಲಡಾಕ್​ನ ಹಾಟ್​ ಸ್ಪ್ರಿಂಗ್​ ಪ್ರದೇಶದಲ್ಲಿ ದಾಳಿ ಮಾಡಿ ಪೊಲೀಸ್​ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು. ಇದರ ನೆನಪಿನಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. 

ಜಮ್ಮು ಮತ್ತು ಕಾಶ್ಮೀರದ ನಕ್ಸಲ್​ ಪ್ರದೇಶದಲ್ಲಿ ನೇಮಕಗೊಂಡಿರುವ ಪೊಲೀಸರನ್ನು ಸ್ಮರಿಸಿದ ಪ್ರಧಾನಿ, ಈ ಪ್ರದೇಶದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿರುವುದರಿಂದ ಇಲ್ಲಿನ ಯುವಕರು ಮುಖ್ಯವಾಹಿನಿಗೆ ಬಂದಿದ್ದಾರೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿಯಲ್ಲಿ ಪಡೆಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಶ್ಲಾಘಿಸಿದರು.

ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೂ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಪೊಲೀಸ್​ ಸಿಬ್ಬಂದಿಯನ್ನು ಸ್ಮರಿಸಲು ಈ ಸ್ಮಾರಕವನ್ನು ನಿರ್ಮಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.

ಸ್ಮಾರಕವನ್ನು ಸುಮಾರು 6.12 ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಇದು ದೆಹಲಿಯ ಚಾಣಕ್ಯಪುರಿಯಲ್ಲಿದೆ. ಸ್ವಾತಂತ್ಯ ಬಂದಾಗಿನಿಂದ ಇಲ್ಲಿಯವರೆಗೆ ಸುಮಾರು 34,844 ಪೊಲೀಸ್​ ಸಿಬ್ಬಂದಿ ಹುತಾತ್ಮರಾಗಿದ್ದು, ಈ ವರ್ಷ 424 ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.