ಅಕಾಡೆಮಿ ಪ್ರಶಸ್ತಿಯ ಅಂತಿಮ ಸುತ್ತಿಗೆ ಖುತುಬ್ -ಇ-ಕೃಪಾ ಸಂಗೀತ ಆಯ್ಕೆ

0
29

ಖ್ಯಾಂತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ಕೆಎಂ ಸಂಗೀತ ಅಕಾಡೆಮಿಯ ಖುತುಬ್-ಇ-ಕೃಪಾ ತಂಡ ಹಾಲಿವುಡ್ ಚಿತ್ರ ‘ಲೇಕ್ ಆಫ್ ಫೈರ್’ ಹಾಡಿನ ಸಂಗೀತ 2018ನೇ ಸಾಲಿನ ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ.

‘ಲೇಕ್ ಆಫ್ ಫೈರ್’ ಚಿತ್ರದ “Have you ever wondered”, “I’ll be gone” and “We’ll party all night” ಎಂಬ ಹಾಡು ಸೇರಿದಂತೆ ಅಂತಿಮ ಸುತ್ತಿಗೆ ಆಯ್ಕೆಯಾದ ಹಾಡುಗಳನ್ನು ಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದೆ.
 
ಆಸ್ಕರ್ ಪ್ರಶಸ್ತಿ ವಿಜೇತ ರೆಹಮಾನ್ ಅವರು ಇಂದು ಖುತುಬ್ ಇ ಕೃಪಾ ತಂಡಕ್ಕೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ. 
 
ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ನಟ ಮೋಹನ್ ಲಾಲ್ ಅವರ ಪುಳಿಮುರುಗನ್ ಚಿತ್ರದ ಕಾಡನಾಯುಮ್ ಕಾಲಚಿಲಂಬೆ ಮತ್ತು ಮ್ಯಾನೇಥೆ ಮಾರಿಕುರುಂಬೆ ಎಂಬ ಹಾಡುಗಳು ಸಹ ಆಕಾಡೆಮಿ ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗಿವೆ.