ಅಂಧರ ತ್ರಿಕೋನ್ ಕ್ರಿಕೆಟ್ ಸರಣಿ : ಭಾರತ ತಂಡಕ್ಕೆ ಪ್ರಶಸ್ತಿ

0
678

ಆರಂಭಿಕ ಜೋಡಿಯ ಶತಕದ ಜೊತೆಯಾಟದ ನೆರವಿನಿಂದ ಭಾರತ ತಂಡ ಶನಿವಾರ ಮುಕ್ತಾಯಗೊಂಡ ಅಂಧರ ತ್ರಿಕೋನ ಟ್ವೆಂಟಿ–20 ಕ್ರಿಕೆಟ್ ಸರಣಿಯ ಪ್ರಶಸ್ತಿ ಗೆದ್ದಿತು. ಗೋವಾದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಆತಿಥೇಯರು ಶ್ರೀಲಂಕಾವನ್ನು 10 ವಿಕೆಟ್‌ಗಳಿಂದ ಮಣಿಸಿದರು.

ಬೆಂಗಳೂರು: ಆರಂಭಿಕ ಜೋಡಿಯ ಶತಕದ ಜೊತೆಯಾಟದ ನೆರವಿನಿಂದ ಭಾರತ ತಂಡ ಅಕ್ಟೋಬರ್ 13 ರ ಶನಿವಾರ ಮುಕ್ತಾಯಗೊಂಡ ಅಂಧರ ತ್ರಿಕೋನ ಟ್ವೆಂಟಿ–20 ಕ್ರಿಕೆಟ್ ಸರಣಿಯ ಪ್ರಶಸ್ತಿ ಗೆದ್ದಿತು. ಗೋವಾದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಆತಿಥೇಯರು ಶ್ರೀಲಂಕಾವನ್ನು 10 ವಿಕೆಟ್‌ಗಳಿಂದ ಮಣಿಸಿದರು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಮೊದಲ ಓವರ್‌ನಲ್ಲೇ ವಿಕೆಟ್ ಕಳೆದುಕೊಂಡಿತು. ಈ ಆಘಾತದಿಂದ ಚೇತರಿಸಿಕೊಳ್ಳಲಾಗದ ತಂಡ 20ನೇ ಓವರ್‌ನಲ್ಲಿ 119 ರನ್‌ಗಳಿಗೆ ಆಲೌಟಾಯಿತು. ನಾಯಕ ಅಜಯ್‌ ಕುಮಾರ್ ರೆಡ್ಡಿ ನಾಲ್ಕು ವಿಕೆಟ್‌ ಗಳಿಸಿದರೆ ಎದುರಾಳಿ ತಂಡದ ನಾಯಕ ಪ್ರಿಯಾಂತ 30 ರನ್ ಗಳಿಸಿ ಅಜೇಯರಾಗಿ ಉಳಿದರು. ಸುಲಭ ಗುರಿಯನ್ನು ಭಾರತ 13.1 ಓವರ್‌ಗಳಲ್ಲಿ ದಾಟಿತು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 20 ಓವರ್‌ಗಳಲ್ಲಿ 119 (ಪ್ರಿಯಾಂತ 30; ಅಜಯ್‌ ಕುಮಾರ್‌ ರೆಡ್ಡಿ 15ಕ್ಕೆ4); ಭಾರತ: 13.1 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 120 (ದುರ್ಗಾ ದಾಸ್‌ 63, ಅನಿಲ್‌ 45).

 

ಫಲಿತಾಂಶ: ಭಾರತಕ್ಕೆ 10 ವಿಕೆಟ್‌ಗಳ ಜಯ ಮತ್ತು ಸರಣಿ. ಪಂದ್ಯಶ್ರೇಷ್ಠ: ಅಜಯ್‌ ಕುಮಾರ್ ರೆಡ್ಡಿ.

ಸರಣಿಯ ಶ್ರೇಷ್ಠ ಆಟಗಾರರು: ಅಜಿತ್‌ ಸಿಲ್ವಾ (ಬಿ1), ಅಜಯ್‌ ರೆಡ್ಡಿ (ಬಿ2), ಸುನಿಲ್ ರಮೇಶ್‌ (ಬಿ3).