ಅಂತಾರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್ಸ್ ಫೆಡರೇಷನ್‌ ಉಪಾಧ್ಯಕ್ಷ ರಾಗಿ “ರನಿಂದರ್‌ ಸಿಂಗ್‌” ನೇಮಕ

0
477

ಅಂತಾರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್ಸ್ ಫೆಡರೇಷನ್‌ನ ನಾಲ್ಕು ಉಪಾಧ್ಯಕ್ಷ ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ರನಿಂದರ್‌ ಸಿಂಗ್‌ ಚುನಾಯಿತರಾಗಿದ್ದಾರೆ.
ಇದರೊಂದಿಗೆ ಈ ಹುದ್ದೆ ಅಲಂಕರಿಸಿದ ಭಾರತದ ಮೊದಲಿಗ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ.

ಹೊಸದಿಲ್ಲಿ : ಅಂತಾರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್ಸ್ ಫೆಡರೇಷನ್‌ನ ನಾಲ್ಕು ಉಪಾಧ್ಯಕ್ಷ ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ರನಿಂದರ್‌ ಸಿಂಗ್‌ ಚುನಾಯಿತರಾಗಿದ್ದಾರೆ. 
ಇದರೊಂದಿಗೆ ಈ ಹುದ್ದೆ ಅಲಂಕರಿಸಿದ ಭಾರತದ ಮೊದಲಿಗ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. 51  ವರ್ಷದ ರನಿಂದರ್‌ ಸಿಂಗ್‌ ಪ್ರಸ್ತುತ ಭಾರತೀಯ ರಾಷ್ಟ್ರೀಯ ರೈಫಲ್‌ ಸಂಸ್ಥೆಯ ಅಧ್ಯಕ್ಷ ಸಹ ಆಗಿದ್ದಾರೆ. ಮ್ಯೂನಿಚ್‌ನಲ್ಲಿ ಶುಕ್ರವಾರ ನಡೆದ ವಾರ್ಷಿಕ ಸಭೆಯ ಚುನಾವಣೆಯಲ್ಲಿ ರನಿಂದರ್‌, 161 ಮತಗಳನ್ನು ಪಡೆಯುವ ಮೂಲಕ ಈ ಹುದ್ದೆ ಅಲಂಕರಿಸಿದ್ದಾರೆ. 
ಐರ್ಲೆಂಡ್‌ನ ಕೇವಿನ್‌ ಕಿಲ್ಟಿ (162 ಮತ), ಅಮೆರಿಕದ ರಾಬರ್ಟ್‌ ಮಿಚೆಲ್‌ (153 ಮತ) ಮತ್ತು ಚೀನಾದ ವಾಂಗ್‌ ಯಿಫು (146 ಮತ) ಪುನರಾಯ್ಕೆಯಾಗಿದ್ದಾರೆ. 
ಬಿಂದ್ರಾಗೆ ಬ್ಲೂ ಕ್ರಾಸ್‌ ಗೌರವ 
ಒಲಿಂಪಿಕ್‌ ಸ್ವರ್ಣ ಪದಕ ವಿಜೇತ ಭಾರತದ ಅಭಿನವ್‌ ಬಿಂದ್ರಾ ನವೆಂಬರ್ 30 ರ ಶುಕ್ರವಾರ ಅಂತಾರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್ಸ್ ಫೆಡರೇಷನ್‌(ಐಎಸ್‌ಎಸ್‌ಎಫ್‌)ನ ಅತ್ಯುನ್ನತ ಪ್ರಶಸ್ತಿ ಎನಿಸಿಕೊಂಡಿರುವ ‘ಬ್ಲೂ ಕ್ರಾಸ್‌’ ಗೌರವಕ್ಕೆ ಭಾಜನರಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೂಟಿಂಗ್‌ ಸಾಧನೆಗಳನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತದೆ. ಬ್ಲೂ ಕ್ರಾಸ್‌ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಶೂಟರ್‌ ಬಿಂದ್ರಾ. ಐಎಸ್‌ಎಸ್‌ಎಫ್‌ ಪ್ರಶಸ್ತಿ ದೊರೆತ ಬಗ್ಗೆ ಬಿಂದ್ರಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.