ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ವಿಂಡೀಸ್​ ಆಲ್​ ರೌಂಡರ್ ಬ್ರಾವೊ

0
484

ವಿಂಡೀಸ್​ನ ಆಲ್​ರೌಂಡರ್​ ಡ್ವೇನ್​ ಬ್ರಾವೊ ಇಂದು(ಅಕ್ಟೋಬರ್ 25) ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವುದಾಗಿವುದಾಗಿ ಘೋಷಿಸುವ ಮೂಲಕ ತಮ್ಮ 14 ವರ್ಷದ ವೃತ್ತಿಗೆ ಪರದೆ ಎಳೆದಿದ್ದಾರೆ.

ನವದೆಹಲಿ: ವಿಂಡೀಸ್​ನ ಆಲ್​ರೌಂಡರ್​ ಡ್ವೇನ್​ ಬ್ರಾವೊ ಇಂದು(ಅಕ್ಟೋಬರ್ 25)  ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವುದಾಗಿವುದಾಗಿ ಘೋಷಿಸುವ ಮೂಲಕ ತಮ್ಮ 14 ವರ್ಷದ ವೃತ್ತಿಗೆ ಪರದೆ ಎಳೆದಿದ್ದಾರೆ.

ಆದರೆ, ವಿಶ್ವದಾದ್ಯಂತ ನಡೆಯುವ ಟಿ-20 ಫ್ರಾಂಚೈಸಿ ಕ್ರಿಕೆಟ್​ನಲ್ಲಿ ಬ್ರಾವೊ ಮುಂದುವರಿಯಲಿದ್ದಾರೆ.

2004ರಲ್ಲಿ ವೃತ್ತಿ ಆರಂಭಿಸಿದ 35 ವರ್ಷದ ಬ್ರಾವೊ ಇ್ಲಲಿಯವರೆಗೂ ವೆಸ್ಟ್​ ಇಂಡೀಸ್​ ತಂಡದಿಂದ 40 ಟೆಸ್ಟ್​ ಪಂದ್ಯ, 164 ಒಡಿಐ (ಒನ್​-ಡೇ) ಮತ್ತು 66 ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಮೂಲಕ ಎರಡು ವರ್ಷಗಳ ಹಿಂದೆ ಅಬುಧಾಬಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧ ಪಂದ್ಯವೇ ಬ್ರಾವೋ ವಿಂಡೀಸ್​ ಪರ ಆಡಿದ ಟಿ-20ಯ ಕೊನೆ ಪಂದ್ಯವಾಗಿದೆ. ಅಕ್ಟೋಬರ್​ 2017ರಲ್ಲಿ ಒನ್​ ಡೇ ಪಂದ್ಯವನ್ನು ಪ್ರತಿನಿಧಿಸಿದ್ದ ಬ್ರಾವೋ, ಡಿಸೆಂಬರ್​ 2010ರಲ್ಲಿ ತಮ್ಮ ಕೊನೆಯ ಟೆಸ್ಟ್​ ಪಂದ್ಯ ಆಡಿದ್ದರು.

ನಿವೃತ್ತಿ ಬಗ್ಗೆ ಮಾಧ್ಯಮ ಹೇಳಿಕೆಗಳಿಗೆ ನೀಡಿರುವ ಬ್ರಾವೊ, ನಾನು ಇಂದು ಅಧಿಕೃತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನ ಎಲ್ಲ ಮಾದರಿಯಿಂದಲೂ ನಾನು ನಿವೃತ್ತಿ ಹೊಂದಿದ್ದೇನೆ. ಜುಲೈ 2004ರಲ್ಲಿ ಇಂಗ್ಲೆಂಡ್​ ವಿರುದ್ಧ ಲಾರ್ಡ್ಸ್​ ಮೈದಾನಕ್ಕಿಳಿಯುವ ಮುಂಚೆ ನನಗೆ ಮರೂನ್​ ಕ್ಯಾಪ್​ ತೆಗೆದುಕೊಂಡಿದ್ದು ಇನ್ನೂ ನೆನಪಿದೆ. ನನ್ನ ಮೊದಲ ಪಂದ್ಯದಲ್ಲಿ ಇದ್ದ ಹುರುಪು, ಪ್ಯಾಶನ್​ ಅನ್ನು ಇಂದಿಗೂ ಉಳಿಸಿಕೊಂಡಿದ್ದೇನೆ ಎಂದಿದ್ದಾರೆ.

ವೆಸ್ಟ್ ಇಂಡೀಸ್​ ತಂಡದ ನಾಯಕನ ಸ್ಥಾನವನ್ನೂ ನಿಭಾಯಿಸಿರುವ ಬ್ರಾವೊ, ಟೆಸ್ಟ್​ನಲ್ಲಿ 2,200 ರನ್​, 86 ವಿಕೆಟ್​; ಒನ್​-ಡೇ ಪಂದ್ಯಗಳಲ್ಲಿ 2,968 ರನ್​, 199 ವಿಕೆಟ್​ ಮತ್ತು ಟಿ-20 ಪಂದ್ಯದಲ್ಲಿ 1,142 ರನ್​ ಮತ್ತು 52 ವಿಕೆಟ್​ಗಳನ್ನು ಪಡೆದು ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. (ಏಜೆನ್ಸೀಸ್)