ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್ ಪಟ್ಟಿ : ಕೊಹ್ಲಿ ನಂ.1; ರೋಹಿತ್ ನಂ.2

0
588

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ರೋಹಿತ್ ಶರ್ಮಾ

ದುಬೈ:ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 

 
ವೆಸ್ಟ್‌ಇಂಡೀಸ್ ವಿರುದ್ಧದ ಏಕದಿನ ಸರಣಿಯ ವೇಳೆಯಲ್ಲಿ ಅತಿ ವೇಗದಲ್ಲಿ 10,000 ರನ್ ಮೈಲುಗಲ್ಲು ತಲುಪಿರುವ ವಿರಾಟ್ ಕೊಹ್ಲಿ ಹ್ಯಾಟ್ರಿಕ್ ಶತಕ ಸಾಧನೆಯನ್ನು ಮಾಡಿದ್ದರು. ಈ ಮೂಲಕ ತಮ್ಮ ರೇಟಿಂಗ್‌ನ್ನು ಮತ್ತಷ್ಟು ಉತ್ತಮಪಡಿಸಿದ್ದಾರೆ. 

ಅಗ್ರ ಎರಡು ಸ್ಥಾನಗಳನ್ನು ಟೀಮ್ ಇಂಡಿಯಾ ನಾಯಕ ಉಪನಾಯಕರುಗಳಾದ ವಿರಾಟ್ ಕೊಹ್ಲಿ ಹಾಗೂ  ರೋಹಿತ್ ಶರ್ಮಾ ಹಂಚಿಕೊಂಡಿದ್ದಾರೆ. 

ವಿರಾಟ್ 899 ಹಾಗೂ ರೋಹಿತ್ 871 ರೇಟಿಂಗ್ ಅಂಕಗಳನ್ನು ಪಡೆದಿದ್ದಾರೆ. ಈ ಪೈಕಿ 900 ತಲುಪಲು ಕೊಹ್ಲಿಗಿನ್ನು ಕೇವಲ ಒಂದು ಅಂಕದ ಅಗತ್ಯವಿದೆ. ವಿಂಡೀಸ್ ಸರಣಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿರುವ ವಿರಾಟ್ 453 ಹಾಗೂ ರೋಹಿತ್ 389 ರನ್ ಗಳಿಸಿದ್ದರು. ರೋಹಿತ್ ಎರಡು ಬಾರಿ 150ಕ್ಕೂ ಹೆಚ್ಚು ರನ್ ಹಾಗೂ ಒಂದು ಅರ್ಧಶತಕವನ್ನು ಬಾರಿಸಿದ್ದರು.