ಅಂತರರಾಷ್ಟ್ರೀಯ ಶೂಟಿಂಗ್‌ ಸ್ಪರ್ಧೆ: ಚಿನ್ನ ಗೆದ್ದ ಹೀನಾ ಸಿಧು

0
19

ಭಾರತದ ಹೀನಾ ಸಿಧು ಇಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಶೂಟಿಂಗ್‌ ಸ್ಪರ್ಧೆಯ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.

ಹ್ಯಾನೋವರ್‌, ಜರ್ಮನಿ : ಭಾರತದ ಹೀನಾ ಸಿಧು ಇಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಶೂಟಿಂಗ್‌ ಸ್ಪರ್ಧೆಯ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ಇದೇ ವಿಭಾಗದಲ್ಲಿ ಭಾರತದ ಮತ್ತೊಬ್ಬ ಶೂಟರ್‌ ಪಿ. ಶ್ರೀ ನಿವೇತಾ ಕಂಚಿನ ಪದಕ ಗೆದ್ದಿದ್ದಾರೆ.

ರೋಚಕ ಹಣಾಹಣಿಯಿಂದ ಕೂಡಿದ್ದ ಫೈನಲ್‌ ಸುತ್ತಿನಲ್ಲಿ ಹೀನಾ ಹಾಗೂ ಫ್ರಾನ್ಸ್‌ನ ಮ್ಯಾಟಿಲ್ಡೆ ಲ್ಯಾಮೊಲ್‌ 239.8 ಪಾಯಿಂಟ್ಸ್‌ ಗಳಿಸಿದರು. ಇದರಿಂದಾಗಿ ವಿಜೇತರ ನಿರ್ಧಾರಕ್ಕೆ ಟೈ–ಬ್ರೇಕರ್‌ನ ಮೊರೆ ಹೋಗಲಾಯಿತು. ಇದರಲ್ಲಿ ಮುನ್ನಡೆ ಸಾಧಿಸಿದ ಹೀನಾ, ಮ್ಯಾಟಿಲ್ಡೆಗಿಂತ ಹೆಚ್ಚು ಪಾಯಿಂಟ್ಸ್‌ ಗಳಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಶ್ರೀ ನಿವೇತಾ ಅವರು 219.2 ಪಾಯಿಂಟ್ಸ್‌ ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಅರ್ಹತಾ ಸುತ್ತಿನಲ್ಲಿ ಹೀನಾ ಒಟ್ಟು 572 ಪಾಯಿಂಟ್ಸ್‌ ಸಂಗ್ರಹಿಸಿದ್ದರು.