ಅಂಡಮಾನ್‌ಗೆ ಪ್ರತಿ ವರ್ಷ 4 ಲಕ್ಷ ಪ್ರವಾಸಿಗರು

0
283

ಪ್ರತಿ ವರ್ಷ ಸರಾಸರಿ 15,000 ವಿದೇಶಿಯರು ಸೇರಿದಂತೆ ಸುಮಾರು 4 ಲಕ್ಷ ಪ್ರವಾಸಿಗರು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಿಗೆ ಭೇಟಿ ನೀಡುತ್ತಾರೆ.

ಹೊಸದಿಲ್ಲಿ: ಪ್ರತಿ ವರ್ಷ ಸರಾಸರಿ 15,000 ವಿದೇಶಿಯರು ಸೇರಿದಂತೆ ಸುಮಾರು 4 ಲಕ್ಷ ಪ್ರವಾಸಿಗರು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಿಗೆ ಭೇಟಿ ನೀಡುತ್ತಾರೆ. 

ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, ದ್ವೀಪದ ನೈಸರ್ಗಿಕ ಸಂಪತ್ತು, ಕಡಲ ಕಿನಾರೆಗಳು, ಸಸ್ಯ ಮತ್ತು ಪ್ರಾಣಿ ಸಂಪತ್ತು ಹಾಗೂ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಲು 2015ರಿಂದ ಈ ವರ್ಷದ ಅಕ್ಟೋಬರ್‌ವರೆಗೆ 16 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಈ ದ್ವೀಪಗಳಿಗೆ ಭೇಟಿ ನೀಡಿದ್ದಾರೆ. ಇಲ್ಲಿರುವ 572 ಕಿರುದ್ವೀಪಗಳ ಪೈಕಿ ಸುಮಾರು 38 ದ್ವೀಪಗಳು ವಾಸಯೋಗ್ಯವಾಗಿವೆ. 

ಈ ವರ್ಷ ಅಕ್ಟೋಬರ್‌ವರೆಗೆ 4,00,019 ಪ್ರವಾಸಿಗರು ಭೇಟಿ ನೀಡಿದ್ದಾರೆ. ಅಂಡಮಾನ್‌ ಮತ್ತು ನಿಕೋಬಾರ್‌ ಕೇಂದ್ರಾಡಳಿತ ಪ್ರದೇಶವಾಗಿದ್ದು, ಗೃಹ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿದೆ. 

ಕಳೆದ ವಾರ ಉತ್ತರ ಸೆಂಟಿನೆಲ್‌ ದ್ವೀಪದಲ್ಲಿ ಸ್ಥಳೀಯ ಬುಡಕಟ್ಟು ಜನಾಂಗದಿಂದ ಕೊಲೆಯಾದ ಅಮೆರಿಕನ್‌ ಪ್ರಜೆ ಜಾನ್‌ ಅಲೆನ್‌ ಚೌ(27) ಕಾರಣ ಅಂಡಮಾನ್‌ ಸುದ್ದಿಯಲ್ಲಿತ್ತು.