ಅಂಚೆ ಮೂಲಕ ತಾಂತ್ರಿಕ ಶಿಕ್ಷಣ ಬೇಡ: ಸುಪ್ರೀಂ ಕೋರ್ಟ್

0
23

ಅಂಚೆ ಮೂಲಕ ತಾಂತ್ರಿಕ ಶಿಕ್ಷಣ ನೀಡಬಾರದೆಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.

ಎಂಜಿನಿಯರಿಂಗ್‌ನಂಥ ಪದವಿಯನ್ನು ದೂರ ಶಿಕ್ಷಣದ ಮೂಲಕ ನೀಡುವ ಶಿಕ್ಷಣ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟೋ ತಡೆಯೊಡ್ಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಪಂಜಾಬ್ ಹಾಗೂ ಹರಿಯಾಣ ಹೈ ಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ದೂರ ಶಿಕ್ಷಣದ ಮೂಲಕ ತಾಂತ್ರಿಕ ಪದವಿ ನೀಡಬಾರದೆಂದು ಎಂಬ ಅಭಿಪ್ರಾಯಕ್ಕೆ ಬಂದಿದ್ದು, ಅಂಚೆ ಮೂಲಕ ತಾಂತ್ರಿಕ ಶಿಕ್ಷಣ ನೀಡಲು ಅನುವು ಮಾಡಿಕೊಟ್ಟ ಒಡಿಶಾ ಹೈ ಕೋರ್ಟ್‌ ತೀರ್ಪನ್ನು ತಳ್ಳಿ ಹಾಕಿದೆ.

ಅಂಚೆ ಶಿಕ್ಷಣದ ಮೂಲಕ ಪಡೆದ ‘ಕಂಪ್ಯೂಟರ್ ಪದವಿ’ಯನ್ನು ಪ್ರತಿ ದಿನ ತರಗತಿಗೆ ಹಾಜರಾಗಿ ಪಡೆದ ಪದವಿಯಂತೆ ಪರಿಗಣಿಸುವುದು ಅಸಾಧ್ಯವೆಂದು ಎರಡು ವರ್ಷಗಳ ಹಿಂದೆ ಪಂಜಾಬ್ ಹಾಗೂ ಹರಿಯಾಣ ಹೈ ಕೋರ್ಟ್ ತೀರ್ಪು ನೀಡಿತ್ತು.