ಭಾರತೀಯ ಅಂಚೆ ಪಾವತಿ ಬ್ಯಾಂಕ್ನಲ್ಲಿ ಇದುವರೆಗೆ 19 ಲಕ್ಷ ಖಾತೆಗಳನ್ನು ತೆರೆಯಲಾಗಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಗಿದೆ.
ನವದೆಹಲಿ (ಪಿಟಿಐ): ಭಾರತೀಯ ಅಂಚೆ ಪಾವತಿ ಬ್ಯಾಂಕ್ನಲ್ಲಿ ಇದುವರೆಗೆ 19 ಲಕ್ಷ ಖಾತೆಗಳನ್ನು ತೆರೆಯಲಾಗಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಗಿದೆ.
‘ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನಲ್ಲಿ (ಐಪಿಪಿಬಿ) ಈ ತಿಂಗಳ ಡಿಸೆಂಬರ್ 24ರವರೆಗೆ 18,96,410 ಖಾತೆಗಳನ್ನು ಆರಂಭಿಸಲಾಗಿದೆ. 9 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸಲಾಗಿದೆ’ ಎಂದು ಹಣಕಾಸು ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಬ್ಯಾಂಕಿಂಗ್ ಸೌಲಭ್ಯ ವಂಚಿತರಿಗಾಗಿ ಅಂಚೆ ಪಾವತಿ ಬ್ಯಾಂಕ್ಗಳನ್ನು ಆರಂಭಿಸಲಾಗಿದೆ. ಉಳಿತಾಯ, ಚಾಲ್ತಿ ಖಾತೆ, ನಗದು ನೇರ ವರ್ಗಾವಣೆ, ನಾಗರಿಕ ಸೇವೆಗಳ ಶುಲ್ಕ ಪಾವತಿ ಮತ್ತಿತರ ಉದ್ದೇಶಕ್ಕೆ ಪೇಮೆಂಟ್ಸ್ ಬ್ಯಾಂಕ್ಗಳು ಸೌಲಭ್ಯ
ಕಲ್ಪಿಸಿಕೊಡುತ್ತಿವೆ.
ಕಂಪನಿಗಳ ನೋಂದಣಿ ರದ್ದು: ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಕಂಪನಿಗಳ ನೋಂದಣಿ ರದ್ದುಪಡಿಸಲಾಗಿದೆ. ದೀರ್ಘ ಸಮಯದಿಂದ ವಹಿವಾಟು ನಡೆಸದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
‘ಕಂಪನಿ ಕಾಯ್ದೆ ಪಾಲಿಸದ, ನಿರಂತರವಾಗಿ ಎರಡು ವರ್ಷ ವಹಿವಾಟು ನಡೆಸದ, ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದ ಶಂಕಿತ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ’ ಎಂದು ಕಂಪನಿ ವ್ಯವಹಾರಗಳ ರಾಜ್ಯ ಸಚಿವ ಪಿ. ಪಿ. ಚೌಧರಿ ಹೇಳಿದ್ದಾರೆ.