ಅಂಚೆ ಕಚೇರಿ ಹೂಡಿಕೆ: ಹೊಸ ಬಡ್ಡಿದರ

0
17

ಜುಲೈ- ಸೆಪ್ಟೆಂಬರ್ ತ್ರೈಮಾಸಿಕ ಅವಧಿಗೆ ಸಾರ್ವಜನಿಕ ಭವಿಷ್ಯ ನಿಧಿ ( ಪಿಪಿಎಫ್), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ, ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ) ಸೇರಿ ಹಲವು ಅಂಚೆ ಕಚೇರಿ ಯೋಜನೆಗಳ ಬಡ್ಡಿ ದರಗಳನ್ನು ತಗ್ಗಿಸಲಾಗಿದೆ.

ಜುಲೈ- ಸೆಪ್ಟೆಂಬರ್ ತ್ರೈಮಾಸಿಕ ಅವಧಿಗೆ ಸಾರ್ವಜನಿಕ ಭವಿಷ್ಯ ನಿಧಿ ( ಪಿಪಿಎಫ್), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ, ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ) ಸೇರಿ ಹಲವು ಅಂಚೆ ಕಚೇರಿ ಯೋಜನೆಗಳ ಬಡ್ಡಿ ದರಗಳನ್ನು ತಗ್ಗಿಸಲಾಗಿದೆ.

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) : ಪಿಪಿಎಫ್ ಗೆ ಶೇ 8 ರಷ್ಟು ಬಡ್ಡಿದರವಿತ್ತು. ಆದರೆ ಜುಲೈನಿಂದ ಸೆಪ್ಟೆಂಬರ್ ಅವಧಿಗೆ ಈ ಬಡ್ಡಿಯನ್ನು ಶೇ 7.9 ಕ್ಕೆ ಇಳಿಸಲಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆ: ಈ ಯೋಜನೆಯ ಬಡ್ಡಿ ದರವನ್ನು ಶೇ 8.4 ಕ್ಕೆ ಇಳಿಸಲಾಗಿದೆ. ಈ ಮೊದಲು ಬಡ್ಡಿ ದರ ಶೇ 8.5 ರಷ್ಟಿತ್ತು. 10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಯಾವುದೇ ಅಂಚೆ ಕಚೇರಿಯಲ್ಲಿ ಈ ಖಾತೆ ಆರಂಭಿಸಬಹುದು.

ಹಿರಿಯ ನಾಗರಿಕರ ಉಳಿತಾಯ ಯೋಜನೆ: ಈ ಯೋಜನೆಯ ಬಡ್ಡಿ ದರವನ್ನು ಈಗ ಶೇ 8.6 ಕ್ಕೆ ನಿಗದಿ ಮಾಡಲಾಗಿದೆ. ಈ ಮೊದಲು ಬಡ್ಡಿದರ ಶೇ 8.7 ರಷ್ಟಿತ್ತು. 5 ವರ್ಷಗಳ ಅವಧಿಯ ಈ ಯೋಜನೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇದು ಅನ್ವಯಿಸಲಿದೆ.

ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ): ಎನ್ಎಸ್‌ಸಿಯಲ್ಲಿ ಬಡ್ಡಿ ದರ ಶೇ 8 ರಿಂದ ಶೇ 7.9 ಕ್ಕೆ ಇಳಿಸಲಾಗಿದೆ. ಈ ಹೂಡಿಕೆಯ ಅವಧಿ 5 ವರ್ಷಗಳಾಗಿದ್ದು ಸೆಕ್ಷನ್ 80 ಸಿ ಅಡಿ ತೆರಿಗೆ ವಿನಾಯಿತಿ ಲಭ್ಯ.

ಅಂಚೆ ಕಚೇರಿ ಅವಧಿ ಠೇವಣಿ ಯೋಜನೆ: ಪರಿಷ್ಕೃತ ದರದಂತೆ ಅಂಚೆ ಕಚೇರಿ ಅವಧಿ ಠೇವಣಿ ಯೋಜನೆಯಲ್ಲಿ ಒಂದು, ಎರಡು ಹಾಗೂ ಮೂರು ವರ್ಷಗಳ ಅವಧಿಗೆ ಹಣ ಹೂಡಿಕೆ ಮಾಡಿದರೆ ಶೇ 6.9 ರಷ್ಟು ಬಡ್ಡಿ ಸಿಗಲಿದೆ.

ಐದು ವರ್ಷಗಳ ಅವಧಿ ಠೇವಣಿ ಯೋಜನೆಯಲ್ಲಿ ಶೇ 7.7 ರಷ್ಟು ಬಡ್ಡಿ ವರಮಾನ ಸಿಗಲಿದೆ. ಐದು ವರ್ಷಗಳ ಆರ್‌ಡಿ ಉಳಿತಾಯಕ್ಕೆ ಶೇ 7.2 ರ ಬಡ್ಡಿ ದರ ನಿಗದಿ ಮಾಡಲಾಗಿದೆ. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯ ಬಡ್ಡಿ ದರವನ್ನು ಶೇ 7.7 ರಿಂದ ಶೇ 7.6 ಕ್ಕೆ ಇಳಿಸಲಾಗಿದೆ. ಕಿಸಾನ್ ವಿಕಾಸ್ ಪತ್ರದ ಬಡ್ಡಿದರವನ್ನು ಶೇ 7.7 ರಿಂದ ಶೇ 7.6 ಕ್ಕೆ ಇಳಿಸಲಾಗಿದೆ.