ಅಂಚೆ ಕಚೇರಿಯ “ಸಣ್ಣ ಉಳಿತಾಯಗಳ” ಬಡ್ಡಿದರ ಕಡಿತ

0
18

ಕೇಂದ್ರ ಸರ್ಕಾರವು ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರವನ್ನು ಶೇ 0.1ರಷ್ಟು ಕಡಿತ ಮಾಡಿದೆ.

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರವು ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರವನ್ನು ಶೇ 0.1ರಷ್ಟು ಕಡಿತ ಮಾಡಿದೆ.

2019–20ನೇ ಹಣಕಾಸು ವರ್ಷದ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕಕ್ಕೆ ಈ ಬಡ್ಡಿದರವು ಅನ್ವಯಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಾಮರ್ಶಿಸುವ ವ್ಯವಸ್ಥೆ ಜಾರಿಯಲ್ಲಿ ಇದೆ.

ಉಳಿತಾಯ ಠೇವಣಿಗಳ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಶೇ 4ರಷ್ಟನ್ನೇ ಉಳಿಸಿಕೊಳ್ಳಲಾಗಿದೆ.

ಕಿಸಾನ್‌ ವಿಕಾಸ ಪತ್ರದ (ಕೆವಿಪಿ) ಮುಕ್ತಾಯದ ಅವಧಿಯನ್ನು 112 ತಿಂಗಳಿನಿಂದ 113 ತಿಂಗಳಿಗೆ ಹೆಚ್ಚಿಸಲಾಗಿದೆ.

ಹೆಸರು     ಹಾಲಿ ದರ(%)  ಪರಿಷ್ಕೃತ ದರ(%)
ಪಿಪಿಎಫ್         8  7.9 
ಎನ್.ಎಸ್.ಸಿ     8   7.9
ಕಿಸಾನ್ ವಿಕಾಸ್ ಪತ್ರ 7.7   7.6
ಸುಕನ್ಯಾ ಸಮೃದ್ದಿ ಖಾತೆ         8.5   8.4
ಅವಧಿ ಠೇವಣಿ(1- 3 ವರ್ಷ)                     7     6.9
5 ವರ್ಷದ ಅವಧಿ ಠೇವಣಿ        7.3   7.2
5 ವರ್ಷದ ಹಿರಿಯ ನಾಗರಿಕರ ಉಳಿತಾಯ ಯೋಜನೆ      8.7     8.6